ಭಿನ್ನಾಭಿಪ್ರಾಯಗಳಿದ್ದು, ಪ್ರಮುಖ ವಿಚಾರಗಳ ಕುರಿತು ನಾವು ಚರ್ಚೆ ನಡೆಸುವುದಿಲ್ಲ. ಕೊನೆ ಕ್ಷಣದಲ್ಲಿ ಮಸೂದೆಯನ್ನು ಪ್ರಸ್ತಾಪ ಮಾಡುವ ಕೇಂದ್ರ ಸ್ರಕಾರ ಬಳಿಕ ಮೇಲ್ಮನೆಯ ಬಹುಮತದ ಆಧಾರದ ಮೇರೆಗೆ ಮಸೂದೆಯನ್ನು ಅಂಗೀಕರಿಸುತ್ತದೆ. ಕೇವಲ ನಾಲ್ಕು ದಿನಗಳಲ್ಲಿ ಚರ್ಚೆ ನಡೆಸುವುದು ಹೇಗೆ? ಕೇಂದ್ರ ಸರ್ಕಾರ ಕೇವಲ ಕಣ್ಣೊರೆಸುವ ಪ್ರಯತ್ನಗಳ್ನು ಮಾಡುತ್ತಿದೆ. ಬಜೆಟ್ ಅಧಿವೇಶನ ಮಾಡಬೇಕು ಅಷ್ಟೇ... ಅಧಿವೇಶನವನ್ನು ಮಾಡಿ ಚುನಾವಣೆಯತ್ತ ಗಮನಹರಿಸೋಣ ಎನ್ನುವಂತಿದೆ ಕೇಂದ್ರದ ನಿಲುವು. ಬಜೆಟ್ ಅಧಿವೇಶನವನ್ನು ಆಡಳಿತಾರೂಢ ಸರ್ಕಾರ ಸುಲಭವಾಗಿ ತೆಗೆದುಕೊಳ್ಳುತ್ತಿದೆ. ಹಾಗೆಯೇ ಮಸೂದೆಗಳೂ ಚರ್ಚೆಗಳಿಲ್ಲದೆಯೇ ಅಂಗೀಕಾರಗೊಳ್ಳುತ್ತಿವೆ. ನಮ್ಮಲ್ಲಿ ಹೆಚ್ಚಿನ ಬಹುಮತವಿದ್ದು, ನಾವು ಏನನ್ನು ಬೇಕಾದರೂ ಮಾಡಬಹುದು ಎಂದು ತಿಳಿದಿದ್ದಾರೆಂದು ಹೇಳಿದ್ದಾರೆ.