ವಿದೇಶಾಂಗ ಕಾರ್ಯದರ್ಶಿಯಾಗಿ ವಿಜಯ್ ಗೋಖಲೆ ಅಧಿಕಾರ ಸ್ವೀಕಾರ

ಭಾರತದ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ವಿಜಯ್ ಗೋಖಲೆ ಇಂದು ಅಧಿಕಾರ ಸ್ವೀಕರಿಸಿದರು. ಭಾರತೀಯ ವಿದೇಶಾಂಗ ಸೇವೆಯ 1981ರ ಬ್ಯಾಚಿನ ಅಧಿಕಾರಿಯಾಗಿರುವ ವಿಜಯ್ ಗೋಖಲೆ ಇಂದು ಬೆಳಗ್ಗೆ ಭಾರತದ ನೂತನ ವಿದೇಶಾಂಗ ಕಾರ್ಯದರ್ಶಿ ಹುದ್ದೆ ಅಲಂಕರಿಸಿದರು.
ಭಾರತದ ನೂತನ ವಿದೇಶಾಂಗ  ಕಾರ್ಯದರ್ಶಿಯಾಗಿ ವಿಜಯ್ ಗೋಖಲೆ ಇಂದು ಅಧಿಕಾರ ಸ್ವೀಕರಿಸಿದರು.
ಭಾರತದ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ವಿಜಯ್ ಗೋಖಲೆ ಇಂದು ಅಧಿಕಾರ ಸ್ವೀಕರಿಸಿದರು.

ದೆಹಲಿ: ಭಾರತದ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ವಿಜಯ್ ಕೇಶವ್
ಗೋಖಲೆ ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಭಾರತೀಯ ವಿದೇಶಾಂಗ ಸೇವೆಯ 1981ರ  ಬ್ಯಾಚಿನ ಅಧಿಕಾರಿಯಾಗಿರುವ ವಿಜಯ್ ಗೋಖಲೆ ಇಂದು ಬೆಳಗ್ಗೆ  ವಿದೇಶಾಂಗ ಸಚಿವಾಲಯದ ಕೇಂದ್ರ ಕಚೇರಿಯಲ್ಲಿ ಭಾರತದ ನೂತನ ವಿದೇಶಾಂಗ ಕಾರ್ಯದರ್ಶಿ ಹುದ್ದೆ ಅಲಂಕರಿಸಿದರು. ಇದಕ್ಕೂ ಮುನ್ನ ಅವರು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಟ್ವಿಟ್ ಮಾಡಿದ್ದಾರೆ.

ವಿಜಯ್ ಗೋಖಲೆ ಹಾಂಕಾಂಗ್, ಬಿಜೀಂಗ್, ಮತ್ತು ನ್ಯೂಯಾರ್ಕ್ ಗಳಲ್ಲಿ ರಾಯಬಾರ ಕಾರ್ಯಬಾರ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ನಿಬಾಯಿಸಿದ್ದಾರೆ. ಹಣಕಾಸು ವಿಭಾಗದ ಉಪ ಕಾರ್ಯದರ್ಶಿಯಾಗಿ, ಚೀನಾ ಮತ್ತು ಪೂರ್ವ ಏಷ್ಯಾ ವಿಭಾಗದ ನಿರ್ದೇಶಕರಾಗಿ. ಹಾಗೂ ಪೂರ್ವ ಏಷ್ಯಾದ ಜಂಟಿ ಕಾರ್ಯದರ್ಶಿಯಾಗಿಯೂ ವಿದೇಶಾಂಗ ಸಚಿವಾಲಯದ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

2010 ಜನವರಿಯಿಂದ 2013 ಅಕ್ಟೋಬರ್ ವರೆಗೂ ಮಲೆಷ್ಯಾದ ಭಾರತದ ಕಮಿಷನರ್ ಹಾಗೂ ಜರ್ಮನಿಯಲ್ಲಿ ಭಾರತದ ರಾಯಬಾರಿ ಆಗಿ 2013ರಿಂದ 2016ರವರೆಗೂ ಸೇವೆ  ಸಲ್ಲಿಸಿದ್ದಾರೆ. 2016ರಿಂದ 2017ರವರೆಗೂ ಚೀನಾದ ಭಾರತದ ರಾಯಬಾರಿಯಾಗಿಯೂ ವಿಜಯ್ ಗೋಖಲೆ  ಕಾರ್ಯನಿರ್ವಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com