ನವದೆಹಲಿ: ಭಾರತದಲ್ಲಿ ಐದು ವರ್ಷದೊಳಗಿನ 47 ಮಿಲಿಯನ್ ಮಕ್ಕಳು ಕಲುಷಿತ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಗ್ರೀನ್ ಪೀಸ್ ಇಂಡಿಯಾ ವರದಿಯಲ್ಲಿ ಹೇಳಲಾಗಿದೆ.
ಈ ಪೈಕಿ 17 ಮಿಲಿಯನ್ ಮಕ್ಕಳು ವಾಸಿಸುವ ಪ್ರದೇಶದಲ್ಲಿ ವಾಯುಮಾಲಿನ್ಯದ ಪ್ರಮಾಣ ಮಿತಿ ಮೀರಿದ್ದು, ಉತ್ತರ ಪ್ರದೇಶ, ರಾಜಸ್ತಾನ, ಬಿಹಾರ, ಮಹಾರಾಷ್ಟ್ರ ಮತ್ತು ದೆಹಲಿಯಂತಹ ರಾಜ್ಯಗಳಲ್ಲಿ ಇಂತಹ ಮಕ್ಕಳ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾರ್ಷಿಕವಾಗಿ ಪ್ರತಿ ನಿಮಿಷಕ್ಕೆ 10ರ ಪ್ರಮಾಣದಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವುದು ರಾಷ್ಟ್ರೀಯ ವಾಯು ಗುಣಮಟ್ಟ ಪ್ರಮಾಣದ ವರದಿಯಲ್ಲಿ ಐದು ಬಾರಿ ಕಂಡುಬಂದಿದೆ.
ಇಂತಹ ಪ್ರದೇಶಗಳ ಒಟ್ಟು ಜನಸಂಖ್ಯೆಯಲ್ಲಿ 580 ಮಿಲಿಯನ್ ಜನರು ಗುಣಮಟ್ಟವಿಲ್ಲದ ಗಾಳಿ ಇರುವ ಕಡೆ ವಾಸಿಸುತ್ತಿರುಪುದು ಲಭ್ಯವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯಲ್ಲಿ ತಿಳಿದುಬಂದಿದೆ.
ವಾಯಮಾಲಿನ್ಯ ಮಿತಿ ಮೀರಿದ ನಗರಗಳ ಕ್ರಮಾಂಕದಲ್ಲಿ ದೆಹಲಿ, ಫರಿದಾಬಾದ್, ಬಿವಾಡಿ, ಪಾಟ್ನಾ ಅಗ್ರ ಸ್ಥಾನದಲ್ಲಿವೆ. ಈ ವಿಚಾರದಲ್ಲಿ ಉತ್ತರ ಭಾರತದ ನಗರಗಳಿಗೆ ಹೋಲಿಸಿದ್ದರೆ ದಕ್ಷಿಣ ಭಾರತದ ನಗರಗಳು ಉತ್ತಮವಾಗಿವೆ.ಆದಾಗ್ಯೂ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾಣಕ್ಕೆ ತಕ್ಕಂತೆ ವಾಯುವಿನಲ್ಲಿ ಗುಣಮಟ್ಟ ಸಾಧಿಸಲು ದಕ್ಷಿಣ ಭಾರತದ ನಗರಗಳು ಸೂಕ್ತ ಕ್ರಿಯಾ ಯೋಜನೆ ರೂಪಿಸುವಂತೆ ವರದಿಯಲ್ಲಿ ತಿಳಿಸಲಾಗಿದೆ.
Advertisement