ಚೀನಾ
ದೇಶ
ಚೀನಾದಿಂದ ಡಾಟಾ ಕಳ್ಳತನ, ಬೇಹುಗಾರಿಗೆ ಪತ್ತೆ ಮಾಡಿದ ಆಫ್ರಿಕನ್ ಯೂನಿಯನ್!
ವಿಶ್ವಸಮುದಾಯದಲ್ಲಿ ತನ್ನ ಬಗ್ಗೆ ವಿಶ್ವಾಸ ಮೂಡಿಸುವುದರಲ್ಲಿ ಚೀನಾ ಮತ್ತೊಮ್ಮೆ ಹಿಂದೆಬಿದ್ದಿದ್ದು, ಏಷ್ಯಾದ ಸೂಪರ್ ಪವರ್ ರಾಷ್ಟ್ರವಾಗಬೇಕೆಂದುಕೊಳ್ಳುತ್ತಿರುವ ಚೀನಾದ ಬೇಹುಗಾರಿಕೆ ಹಾಗೂ ಡಾಟಾ ಕಳ್ಳತನವನ್ನು
ಬೀಜಿಂಗ್: ವಿಶ್ವಸಮುದಾಯದಲ್ಲಿ ತನ್ನ ಬಗ್ಗೆ ವಿಶ್ವಾಸ ಮೂಡಿಸುವುದರಲ್ಲಿ ಚೀನಾ ಮತ್ತೊಮ್ಮೆ ಹಿಂದೆಬಿದ್ದಿದ್ದು, ಏಷ್ಯಾದ ಸೂಪರ್ ಪವರ್ ರಾಷ್ಟ್ರವಾಗಬೇಕೆಂದುಕೊಳ್ಳುತ್ತಿರುವ ಚೀನಾದ ಬೇಹುಗಾರಿಕೆ ಹಾಗೂ ಡಾಟಾ ಕಳ್ಳತನವನ್ನು ಆಫ್ರಿಕನ್ ಯೂನಿಯನ್ ಪತ್ತೆ ಮಾಡಿದೆ.
ಆಫ್ರಿಕನ್ ಯೂನಿಯನ್ ಕಂಪ್ಯೂಟರ್ ಗಳಲ್ಲಿದ್ದ ಮಹತ್ವದ ಡಾಟಾಗಳನ್ನು ಶಾಂಘೈನಲ್ಲಿರುವ ಸರ್ವರ್ ಗಳಿಗೆ ನಕಲು ಮಾಡುತ್ತಿದ್ದ ಬಗ್ಗೆ ಫ್ರೆಂಚ್ ನ ಪತ್ರಿಕಾ ವರದಿಯೊಂದು ಮಾಡಿದ್ದ ಆರೋಪವನ್ನು ಚೀನಾ ತಳ್ಳಿಹಾಕಿತ್ತು.
ಆದರೆ ಪ್ರತಿ ರಾತ್ರಿ 2 ಗಂಟೆ ವೇಳೆಯಲ್ಲಿ ಡಾಟಾ ವರ್ಗಾವಣೆ ಅತಿ ಹೆಚ್ಚು ನಡೆಯುತ್ತಿದ್ದದ್ದನ್ನು ಆಫ್ರಿನ್ ಯೂನಿಯನ್ ಸಿಬ್ಬಂದಿಗಳು ಪತ್ತೆ ಮಾಡಿದ್ದು, ಆಫ್ರಿನ್ ಯೂನಿಯನ್ ನ ಗೌಪ್ಯಮಾಹಿತಿಯನ್ನು ಹಾಗೂ ಇತರ ಮಹತ್ವದ ಮಾಹಿತಿಗಳನ್ನು ಕಳೆದ 5 ವರ್ಷಗಳಿಂದ ಚೀನಾ ನಕಲು ಮಾಡುತ್ತಿತ್ತು, 2012 ರಲ್ಲಿ ಆಫ್ರಿಕನ್ ಯೂನಿಯನ್ ನ ಕೇಂದ್ರ ಕಚೇರಿಯನ್ನು ನಿರ್ಮಿಸಿದ್ದ ಚೀನಾ, ಅಲ್ಲಿ ಎಲ್ಲಾ ಕಂಪ್ಯೂಟರ್ ವ್ಯವಸ್ಥೆ ಹಾಗೂ ನೆಟ್ವರ್ಕ್ ವ್ಯವಸ್ಥೆಯನ್ನು ಮಾಡಿ ಅದನ್ನು ಆಫ್ರಿಕನ್ ಯೂನಿಯನ್ ಗೆ ಹಸ್ತಾಂತರಿಸಿತ್ತು. ಡಾಟಾ ಕಳ್ಳತನದ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆಯೇ ಆಫ್ರಿನ್ ಯೂನಿಯನ್ ಹೊಸ ಸರ್ವರ್ ಗಳಿಗೆ ವರ್ಗಾವಣೆಗೊಂಡಿದ್ದು, ಚೀನಾ ಬಣ್ಣ ಬಯಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ