ಭಾರತೀಯ ಮುಸ್ಲಿಮರು ಪ್ರತ್ಯೇಕ ದೇಶಕ್ಕಾಗಿ ಆಗ್ರಹಿಸಬೇಕು: ಕಾಶ್ಮೀರ ಡೆಪ್ಯುಟಿ ಮುಫ್ತಿ ನಜೀರ್ ಉಲ್ ಇಸ್ಲಾಮ್

ದೇಶದಲ್ಲಿ ಮುಸ್ಲಿಮರು ಹೀನಾಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದು, ಭಾರತದಲ್ಲಿರುವ ಮುಸ್ಲಿಮರು ಪ್ರತ್ಯೇಕ ರಾಷ್ಟ್ರಕ್ಕಾಗಿ ಆಗ್ರಹಿಸಬೇಕೆಂದು ಕಾಶ್ಮೀರ ಡೆಪ್ಯುಟಿ ಮುಫ್ತಿ ಅಜಾಮ್ ನಜೀರ್-ಉಲ್-ಇಸ್ಲಾಮ್ ಅವರು ಮಂಗಳವಾರ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ...
ಕಾಶ್ಮೀರ ಡೆಪ್ಯುಟಿ ಮುಫ್ತಿ ಅಜಾಮ್ ನಜೀರ್-ಉಲ್-ಇಸ್ಲಾಮ್
ಕಾಶ್ಮೀರ ಡೆಪ್ಯುಟಿ ಮುಫ್ತಿ ಅಜಾಮ್ ನಜೀರ್-ಉಲ್-ಇಸ್ಲಾಮ್
ಶ್ರೀನಗರ: ದೇಶದಲ್ಲಿ ಮುಸ್ಲಿಮರು ಹೀನಾಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದು, ಭಾರತದಲ್ಲಿರುವ ಮುಸ್ಲಿಮರು ಪ್ರತ್ಯೇಕ ರಾಷ್ಟ್ರಕ್ಕಾಗಿ ಆಗ್ರಹಿಸಬೇಕೆಂದು ಕಾಶ್ಮೀರ ಡೆಪ್ಯುಟಿ ಮುಫ್ತಿ ಅಜಾಮ್ ನಜೀರ್-ಉಲ್-ಇಸ್ಲಾಮ್ ಅವರು ಮಂಗಳವಾರ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, ಲವ್ ಜಿಹಾದ್, ಗೋಹತ್ಯೆ ಸೇರಿದಂತೆ ವಿವಿಧ ವಿಚಾರಗಳ ಸಂಬಂಧ ಭಾರತದಲ್ಲಿರುವ ಮುಸ್ಲಿಮರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ. ವಿಶ್ವದಲ್ಲಿಯೇ ಅತೀ ಹೆಚ್ಚು ಮುಸ್ಲಿಮರಿರುವ ದೇಶಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನದಲ್ಲಿ ಕೇವಲ ಕೋಟಿಯಷ್ಟು ಜನರು ಮಾತ್ರ ಇದ್ದಾರೆ. ಭಾರತದಲ್ಲಿ ಮುಸ್ಲಿಮರ ಮೇಲೆ ಹೀಗೆಯೇ ದೌರ್ಜನ್ಯಗಳು ಮುಂದುವರೆದಿದ್ದೇ ಆದರೆ, ನಾವು ಹೊಸ ದೇಶವನ್ನು ಸ್ಥಾಪನೆ ಮಾಡುತ್ತೇವೆ. ಭಾರತದಲ್ಲಿರುವ ಮುಸ್ಲಿಂ ಸಮುದಾಯದವರು ಪ್ರತ್ಯೇಕ ದೇಶಕ್ಕಾಗಿ ಆಗ್ರಹಿಸಬೇಕೆಂದು ಹೇಳಿದ್ದಾರೆ. 
ಮುಸ್ಲಿಂ ಸಮುದಾಯದವರ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡುತ್ತಿಲ್ಲ. ಭಾರತದಲ್ಲಿರುವ ಮುಸ್ಲಿಮರು ಇಂದು ಹೀನಾಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಮುಸ್ಲಿಂ ಸಂಕಷ್ಟವನ್ನು ಸರ್ಕಾರ ಕೇಳುತ್ತಿಲ್ಲ. ನಮ್ಮ ಸಮಸ್ಯೆಗೆ ಬೇರೇನು ದಾರಿಯಿದೆ? ಭಾರತದಿಂದ ನಾವು ಪ್ರತ್ಯೇಕಗೊಳ್ಳಬೇಕು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com