ಪಶ್ಚಿಮ ಬಂಗಾಳ: ಸೇತುವೆಯಿಂದ ನದಿಗುರುಳಿದ ಬಸ್, ಸಾವಿನ ಸಂಖ್ಯೆ 43ಕ್ಕೆ ಏರಿಕೆ

ಸರ್ಕಾರಿ ಬಸ್ ನದಿಯಲ್ಲಿ ಮುಳಿಗಿ 43 ಮಂದಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ಸಂಭವಿಸಿದೆ.
ಪಶ್ಚಿಮ ಬಂಗಾಳ: ಸೇತುವೆಯಿಂದ ನದಿಗುರುಳಿದ ಬಸ್, ಸಾವಿನ ಸಂಖ್ಯೆ 43ಕ್ಕೆ ಏರಿಕೆ
ಪಶ್ಚಿಮ ಬಂಗಾಳ: ಸೇತುವೆಯಿಂದ ನದಿಗುರುಳಿದ ಬಸ್, ಸಾವಿನ ಸಂಖ್ಯೆ 43ಕ್ಕೆ ಏರಿಕೆ
Updated on: 
ಭಹರಾಮಪುರ್ (ಪಶ್ಚಿಮ ಬಂಗಾಳ): ಸರ್ಕಾರಿ ಬಸ್ ನದಿಯಲ್ಲಿ ಮುಳಿಗಿ 43 ಮಂದಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ಸಂಭವಿಸಿದೆ. 
ತುರ್ತು ನಿರ್ವಹಣಾ ಘಟಕದ ಸದಸ್ಯರು  ಅಪಘಾತ ನಡೆದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನೂ ಐದು ಮಂದಿ ಕಾಣೆಯಾಗಿದ್ದು ಬಸ್ ನಲ್ಲಿ ಒಟ್ಟು ಎಷ್ಟು ಪ್ರಯಾಣಿಕರಿದ್ದರೆನ್ನುವುದು ತಿಳಿದು ಬಂದಿಲ್ಲ ಎಂದು ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಪಿಟಿಐ ಗೆ ತಿಳಿಸಿದರು.
ಬಲಿರ್ಘಾಟ್ ಪ್ರದೇಶದಲ್ಲಿ ಗೋಗ್ರಾ ಕಾಲುವೆಯಿಂದ 42 ಪ್ರಯಾಣಿಕರ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದ್ದು ಇನ್ನೂ ಎಂಟು ಮಂದಿ ಗಾಯಗೊಂಡಿದ್ದಾರೆ.ಸೋಮವಾರ ಮುಂಜಾನೆ ಈ ಅವಘಡ ಸಂಭವಿಸಿತ್ತು. ಇಲ್ಲಿಯವರೆಗೆ, 40 ದೇಹಗಳನ್ನು ಗುರುತಿಸಲಾಗಿದೆ ಮತ್ತು ಅಪಘಾತದಲ್ಲಿ ಗಾಯಗೊಂಡ ಎಂಟು ಮಂದಿಗೆ ಮುರ್ಷಿದಾಬಾದ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ
"ನದಿ ಪಾತ್ರದಲ್ಲಿ ಯಾವುದೇ ದೇಹಗಳು ಸಿಕ್ಕಿಕೊಂಡಿಒಲ್ಲ ಎಂದು ಮನವರಿಕೆಯಾಗುವವರೆಗೂ ಶೋಧ ಕಾರ್ಯಾಚರಣೆ ಮುಂದುವರಿಯುತ್ತದೆ. ಆದರೆ ನೀರಿನ ಕೆಳಭಾಗದಲ್ಲಿ ಕತ್ತಲು ಮತ್ತು ಶೀತ ಹವೆ ಇರುವುದರಿಂದ  ಮೃತದೇಹವನ್ನು ಹುಡುಕುವದು ಕಷ್ಟಕರವಾಗಿದೆ." ಅವರು ಹೇಳಿದರು.
ರಾಜ್ಯ ಸರ್ಕಾರವು ಈಗಾಗಲೇ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದ್ದು ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಐದು ಲಕ್ಷ, ತೀವ್ರ ಸ್ವರೂಪದ ಗಾಯವಾದವರಿಗೆ ಒಂದು ಲಕ್ಷ  ಹಾಗೂ ಇತರೆ ಸಣ್ಣ ಪುಟ್ಟ ಗಾಯಗಾಳಾದವರಿಗೆ 50,000 ರೂ. ಪರಿಹಾರ ವಿತರಣೆಗೆ ಸಿದ್ದ ಎಂದಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಸ್ ಉರುಳಿ ಬಿದ್ದ ಸೇತುವೆಯ ತಪಾಸಣೆಗೆ ಆದೇಶಿಸಿದ್ದಾರೆ. ಬಸ್ ಅಪಗಾತದ ನಂತರ ವಾಹನ ಚಾಲನೆ ಮಾಡುವಾಗ ಮೊಬೈಲ್ ಗಳನ್ನು ಬಳಸುವ ರಾಜ್ಯ ಸರ್ಕಾರಿ ಬಸ್ಸುಗಳ ಚಾಲಕರನ್ನು ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com