"ವಿವಾದಾತ್ಮಕ ಚಿತ್ರ ಪದ್ಮಾವತ್ ನ್ನು ರಾಷ್ಟ್ರಾದ್ಯಂತ ಬಿಡುಗಡೆಗೊಳಿಸಲು ಕಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಅವಕಾಶ ನೀಡಿರುವುದು ನನಗೆ ದುಃಖವನ್ನುಂಟು ಮಾಡಿದೆ. ಇದು ರಜಪೂತ ಸಮುದಾಯದ ಸುಮಾರು 12 ಕೋಟಿ ಜನರ ಭಾವನೆಗೆ ಘಾಸಿ ಮಾಡುತ್ತದೆ ಹರಿಯಾಣ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣ ಪ್ರತಿಭಟನೆಯನ್ನು ಭಯೋತ್ಪಾದಕ ಹಾಗು ಸಮಾಜ ವಿರೋಧಿ ಎಂದು ಹೇಳಿರುವುದು ನನಗೆ ನನಗೆ ಅಚ್ಚರಿ ತಂದಿದೆ. ನಾನು ಹರಿಯಾಣ ಬಿಜೆಪಿಯ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದೇನೆ ಎಸ್.ಎಂ.ಎಸ್, ಇ-ಮೇಲ್, ಟ್ವೀಟ್ ಮತ್ತು ಫೇಸ್ ಬುಕ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ಅವರಿಗೆ ಈ ಕುರಿತು ಮಾಹಿತಿ ನೀಡಿದ್ದೇನೆ." ಸೂರಜ್‌ಪಾಲ್ ಅಮು ಹೇಳಿದರು.