ಭುವನೇಶ್ವರ: ಸೆಕ್ಸ್ ದಂಧೆ ನಡೆಸುತ್ತಿದ್ದ ಕೋಲ್ಕತಾ ಸ್ಪಾ ಮೇಲೆ ಒಡಿಶಾ ಪೊಲೀಸರು ದಾಳಿ ನಡೆಸಿದ್ದು, ಮಾಜಿ ಶಾಸಕ ನಬಿನ್ ನಂದಾ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.
ಘಟನೆ ಬೆನ್ನಲ್ಲೇ ಆಡಳಿತರೂಢ ಬಿಜೆಡಿ ಮಾಜಿ ಶಾಸಕ ನಬಿನ್ ನಂದಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ನಬಿನ್ ಅವರ ವಕೀಲರು ಮಾಜಿ ಶಾಸಕನ ಬಂಧನ ಖಚಿತಪಡಿಸಿದ್ದು, ಪಾರ್ಕ್ ರಸ್ತೆಯಲ್ಲಿರುವ ಸ್ಪಾನಲ್ಲಿದ್ದ ನಬಿನ್ ಅವರನ್ನು ಶನಿವಾರ ಸಂಜೆ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಹಲವು ಯುವತಿಯರು ಸೇರಿದಂತೆ ಸೆಕ್ಸ್ ದಂದೆಯಲ್ಲಿ ತೊಡಗಿದ್ದ 18 ಮಂದಿಯನ್ನು ಬಂಧಿಸಲಾಗಿದೆ.
ಸೆಕ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ನಬಿನ್ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದು, ನನ್ನ ಪರ್ಸ್ ಕದ್ದಿದ್ದ ಕಳ್ಳನನ್ನು ನಾನು ಚೇಸ್ ಮಾಡಿಕೊಂಡು ಸ್ಪಾವರೆಗೆ ಹೋಗಿದ್ದೆ. ಅದೇ ಸಮಯಕ್ಕೆ ಆಗಮಿಸಿದ ಪೊಲೀಸರು ನನ್ನನ್ನು ಗ್ರಾಹಕ ಎಂದು ಬಂಧಿಸಿದರು ಎಂದು ಹೇಳಿದ್ದಾರೆ.