ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

ದೇಶ ಯಾವುದೇ ಸಿದ್ಧಾಂತ ಹೊಂದಿಲ್ಲದ ಬಿಕ್ಕಟ್ಟು ಎದುರಿಸುತ್ತಿದೆ: ಗಡ್ಕರಿ

ಪ್ರಸ್ತುತ ದೇಶ ಯಾವುದೇ ಸಿದ್ದಾಂತವನ್ನು ಹೊಂದಿಲ್ಲ ಎಂಬ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ಜಲಸಂಪನ್ಮೂಲ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
Published on

ಮುಂಬೈ: ಪ್ರಸ್ತುತ ದೇಶ ಯಾವುದೇ ಸಿದ್ದಾಂತವನ್ನು ಹೊಂದಿಲ್ಲ ಎಂಬ ಬಿಕ್ಕಟ್ಟು ಎದುರಿಸುತ್ತಿದೆ ಎಂದು  ಕೇಂದ್ರ ಹೆದ್ದಾರಿ ಹಾಗೂ ಜಲಸಂಪನ್ಮೂಲ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅಧಿಕಾರದಲ್ಲಿ ಉಳಿಯಲು ರಾಜಕಾರಣಿಗಳು ಹಿಂಬದಿ ಮೂಲಕ ಪ್ರಯತ್ನಿಸುವುದು ಟ್ರೆಂಡ್ ಆಗುತ್ತಿರುವುದಕ್ಕೆ ಅವರು ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಎಡ, ಬಲ  ಯಾವುದು ಇಲ್ಲ. ಅವಕಾಶವಾದಿಗಳನ್ನ ನಾವೆಲ್ಲ ನೋಡುತ್ತಾ ಇದ್ದೀವಿ. ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ  ಕೆಲ ಜನರು ಅದಕ್ಕೆ ಸೇರುತ್ತಾರೆ. ನಂತರ ಆ ಪಕ್ಷ ಅಧಿಕಾರ ಕಳೆದುಕೊಂಡ ನಂತರ ಅವರು ಕೂಡಾ ಈ ಪಕ್ಷವನ್ನು ಬಿಟ್ಟು ಬೇರೆ ಪಕ್ಷಗಳ ಕಡೆಗೆ ಹೋಗುತ್ತಾರೆ ಎಂದರು.

ಮುಂಬೈಯಲ್ಲಿನ  ಐಟಿಡಿಎಲ್  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾರು ಜಾತ್ಯಾತೀತದ ಬಗ್ಗೆ ಮಾತನಾಡುತ್ತಾರೋ ಮೊದಲು ಅವರು ಸಿದ್ದಾಂತಗಳು ಪಾಲಿಸಲಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಶಾಹು ಮಹಾರಾಜ, ಜ್ಯೋತಿಬಾ ಪುಲೆ ಅಂಬೇಡ್ಕರ್, ಅವರ ಹೆಸರನ್ನು ಬಳಸಿಕೊಳ್ಳುವವರು ಅವರ ಜಾತ್ಯಾತೀತ ಚಿಂತನೆಗಳನ್ನು ಅಳವಡಿಸಿಕೊಳ್ಳಲ್ಲ, ಆದಾಗ್ಯೂ, ಚುನಾವಣೆ ಬಂದಾಗ  ತಮ್ಮ ಕುಟುಂಬ ಸದಸ್ಯರಿಗೆ , ಅವರ ಕಾರು ಚಾಲಕರಿಗೆ  ಟಿಕೆಟ್ ಗಾಗಿ ಬೇಡಿಕೆ ಇಡುತ್ತಾರೆ ಹೊರತು  ಪಕ್ಷದ ಉತ್ತಮ ಕಾರ್ಯಕರ್ತನಿಗೆ ಅಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com