ಯಾತ್ರಾರ್ಥಿಗಳು
ದೇಶ
ಮಾನಸ ಸರೋವರ ಯಾತ್ರೆಗೆ ತೆರಳಿದ್ದ 500 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಂಕಷ್ಟದಲ್ಲಿ
ಭಾರತದಿಂದ ನೇಪಾಳದ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ಸುಮಾರು 500ಕ್ಕೂ ಹೆಚ್ಚಿನ ಯಾತ್ರಾರ್ಥಿಗಳು...
ಚೆನ್ನೈ : ಭಾರತದಿಂದ ನೇಪಾಳದಲ್ಲಿರುವ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ಸುಮಾರು 500ಕ್ಕೂ ಹೆಚ್ಚಿನ ಯಾತ್ರಾರ್ಥಿಗಳು ಮಾರ್ಗ ಮಧ್ಯದಲ್ಲಿ ಸಿಮಿಕೊಟ್ ಬಳಿ ಸಿಲುಕಿ ಹಾಕಿಕೊಂಡಿದ್ದು, ಪ್ರತಿಕೂಲ ವಾತವಾರಣದಿಂದಾಗಿ ಈ ಭಾಗದಲ್ಲಿನ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ.
ವಿಮಾನ ಸೇವೆ ರದ್ದುಗೊಂಡಿದ್ದರಿಂದ ಹೃದಯಾಘಾತವಾಗಿ 56 ವರ್ಷದ ಲೀಲಾ ನಂಬೊದಿರಿಪಾದ್ ಸಾವನ್ನಪ್ಪಿದ್ದಾರೆ. ಅಲ್ಲಿ ಆಮ್ಲಜನಕ ಪ್ರಮಾಣ ತುಂಬಾ ಕಡಿಮೆ ಮಟ್ಟದಲ್ಲಿ ಇದುದ್ದರಿಂದ ಅವರು ಸಾವನ್ನಪ್ಪಿದ್ದಾರೆ.
ನಿನ್ನೆಯೇ ಭಾರತಕ್ಕೆ ಹೋಗಬೇಕಿತ್ತು, ಆದರೆ, ವಿಮಾನ ಸೇವೆ ರದ್ದುಗೊಂಡರಿಂದ ಹೋಗಲು ಸಾಧ್ಯವಾಗಲಿಲ್ಲ ಎಂದು ಲೀಲಾ ಪತಿ ಸೇತು ಮಾಧವನ್ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ