ಮುಂಬೈ ಸೇತುವೆ ಕುಸಿತ : ಗಾಯಾಳುಗಳಿಗೆ 1 ಲಕ್ಷ ರೂ. ಪರಿಹಾರ ಘೋಷಣೆ

ಭಾರೀ ಮಳೆಯಿಂದ ಮಹಾರಾಷ್ಟ್ರದ ಅಂದೇರಿ ಪಶ್ಚಿಮ ನಿಲ್ದಾಣದಲ್ಲಿನ ರಸ್ತೆ ಮೇಲ್ಸುತುವೆ ಕುಸಿತ ಪ್ರಕರಣವನ್ನು ತನಿಖೆಗೆ ಆದೇಶಿಸಿರುವ ರೈಲ್ವೆ ಸಚಿವ ಪಿಯೂಷ್ ಗೊಯಲ್, ಗಾಯಾಳುಗಳಿಗೆ 1 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.
ಪಿಯೂಷ್ ಗೋಯಲ್
ಪಿಯೂಷ್ ಗೋಯಲ್
ಮುಂಬೈ: ಭಾರೀ ಮಳೆಯಿಂದ ಮಹಾರಾಷ್ಟ್ರದ ಅಂದೇರಿ ಪಶ್ಚಿಮ ನಿಲ್ದಾಣದಲ್ಲಿನ  ರಸ್ತೆ ಮೇಲ್ಸುತುವೆ   ಕುಸಿತ ಪ್ರಕರಣವನ್ನು ತನಿಖೆಗೆ ಆದೇಶಿಸಿರುವ  ರೈಲ್ವೆ ಸಚಿವ ಪಿಯೂಷ್ ಗೊಯಲ್, ಗಾಯಾಳುಗಳಿಗೆ 1 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.
ಇದೊಂದು ದುರದೃಷ್ಟಕರ  ಘಟನೆಯಾಗಿದೆ.  15 ದಿನಗಳೊಳಗೆ ತನಿಖಾ ವರದಿ ನೀಡುವಂತೆ  ರೈಲ್ವೆ ಸುರಕ್ಷತಾ  ಆಯುಕ್ತರಿಗೆ ಆದೇಶಿಸಲಾಗಿದೆ. ಗಾಯಗೊಂಡಿರುವ ಐವರಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಅವರ  ಚಿಕಿತ್ಸಾ ವೆಚ್ಚವನ್ನು  ರೈಲ್ವೆ  ಇಲಾಖೆಯೇ ವಹಿಸಲಿದೆ ಎಂದು ಅವರು ಹೇಳಿದರು.
ಅಂದೇರಿ ಪೂರ್ವ ಹಾಗೂ ಪಶ್ಟಿಮ ನಿಲ್ದಾಣ ಸಂಪರ್ಕಿಸುವ ಗೋಖಲೆ ಸೇತುವೆ ಕುಸಿದು ಸಂಚಾರ ವ್ಯವಸ್ಥೆಯಲ್ಲಿ ಅಡಚಣೆ ಉಂಟಾಗಿತ್ತು.ತೆರವು ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಹಾರ್ಬರ್ ಲೈನ್   ಹಳಿ ಸುಗಮಗೊಂಡಿದೆ ಎಂದು ಪಶ್ಚಿಮ ರೈಲ್ವೆ  ಮಾಹಿತಿ ನೀಡಿದೆ. ಈ ಮಧ್ಯೆ ಉಳಿದಿರುವ ಎಲ್ಲಾ ವಿಭಾಗಗಳ ಕೆಲಸಗಳು ಪೂರ್ಣಗೊಂಡಿವೆ.
ಸುಗಮ ಸಂಚಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಂಬೈ ಪೊಲೀಸ್ ಆಯುಕ್ತ  ಸುಬೋದ್ ಜೈಸ್ವಾಲ್  ಅವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೂಚನೆ ನೀಡಿದ್ದಾರೆ.
ಈ ಮಧ್ಯೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಆಗ್ಗಾಗ್ಗೆ ಬಸ್ ಗಳ ಸಂಚಾರವನ್ನು ಹೆಚ್ಚಿಸುವಂತೆಯೂ ಫಡ್ನವೀಸ್  ಬೃಹನ್ ಮುಂಬೈ ಮಹಾನರ ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com