ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್
ದೇಶ
ದೆಹಲಿ ರಾಜ್ಯವಲ್ಲ, ಕೇಂದ್ರಾಡಳಿತ ಪ್ರದೇಶ; ಸರ್ಕಾರ, ಲೆ.ಗವರ್ನರ್ ಒಟ್ಟಾಗಿ ಕಾರ್ಯನಿರ್ವಹಿಸಬೇಕು: ಶೀಲಾ ದೀಕ್ಷಿತ್
ದೆಹಲಿ ರಾಜ್ಯವಲ್ಲ, ಕೇಂದ್ರಾಡಳಿತ ಪ್ರದೇಶವಾಗಿದ್ದು, ದೆಹಲಿ ಸರ್ಕಾರ ಮತ್ತು ಲೆಫ್ಟಿನಂಟ್ ಗವರ್ನರ್ ಒಟ್ಟಿಗೆ ಕಾರ್ಯನಿರ್ವಹಿಸದೇ ಹೋದರೆ, ದೆಹಲಿ ಜನತೆಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ...
ನವದೆಹಲಿ: ದೆಹಲಿ ರಾಜ್ಯವಲ್ಲ, ಕೇಂದ್ರಾಡಳಿತ ಪ್ರದೇಶವಾಗಿದ್ದು, ದೆಹಲಿ ಸರ್ಕಾರ ಮತ್ತು ಲೆಫ್ಟಿನಂಟ್ ಗವರ್ನರ್ ಒಟ್ಟಿಗೆ ಕಾರ್ಯನಿರ್ವಹಿಸದೇ ಹೋದರೆ, ದೆಹಲಿ ಜನತೆಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಬುಧವಾರ ಹೇಳಿದ್ದಾರೆ.
ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಕಿತ್ತಾಟಕ್ಕೆ ಕುರಿತಂತೆ ಇಂದು ಮಹತ್ವದ ಆದೇಶ ನೀಡಿರುವ ಸುಪ್ರೀಂಕೋರ್ಟ್ ಕೇಂದ್ರಾಡಳಿತ ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶೀಲಾ ದೀಕ್ಷಿತ್ ಅವರು, ಸುಪ್ರೀಂಕೋರ್ಟ್ ಆದೇಶ ಸ್ಪಷ್ಟವಾಗಿದೆ. ಸಂವಿಧಾನದ ಕಾಯ್ದೆ 239 (ಎಎ) ಪ್ರಕಾರ ದೆಹಲಿ ರಾಜ್ಯವಲ್ಲ. ಕೇಂದ್ರಾಡಳಿತ ಪ್ರದೇಶವಾಗಿದೆ. ದೆಹಲಿ ಸರ್ಕಾರ ಮತ್ತು ಲೆಫ್ಟಿನಂಟ್ ಗವರ್ನರ್ ಒಟ್ಟಾಗಿ ಕೆಲಸ ಮಾಡದೇ ಹೋದರೆ, ದೆಹಲಿಗೆ ಸಮಸ್ಯೆಗಳು ಎದುರಾಗಲಿವೆ. ದೆಹಲಿಯಲ್ಲಿ ಕಾಂಗ್ರೆಸ್ 15 ವರ್ಷಗಳ ಕಾಲ ಆಡಳಿದ ನಡೆಸಿತ್ತು. ಆಗ ಯಾವುದೇ ರೀತಿಯ ಮನಸ್ತಾಪಗಳು ಎದುರಾಗಿರಲಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ