ದೆಹಲಿ ಅಧಿಕಾರ ಕಿತ್ತಾಟ: ಸುಪ್ರೀಂಕೋರ್ಟ್ ತೀರ್ಪು ಜಯವಲ್ಲ- ಬಿಜೆಪಿ

ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಕಚೇರಿ ನಡುವಿನ ಹಗ್ಗಜಗ್ಗಾಟ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಗೆಲುವಲ್ಲ ಎಂದು ...
ನಳಿನ್ ಕೊಹ್ಲಿ
ನಳಿನ್ ಕೊಹ್ಲಿ
Updated on
ನವದೆಹಲಿ: ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಕಚೇರಿ ನಡುವಿನ ಹಗ್ಗಜಗ್ಗಾಟ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಗೆಲುವಲ್ಲ ಎಂದು ಬಿಜೆಪಿ ಹೇಳಿದೆ.
ಇದನ್ನು ತನ್ನ ಜಯ ಎಂದು ದೆಹಲಿ ಸರ್ಕಾರ ಹೇಗೆ ಘೋಷಿಸಿದೆ ಎಂಬುದು ನನಗೆ ತಿಳಿಯುತ್ತಿಲ್ಲ ದೆಹಲಿ ಒಂದು ರಾಜ್ಯವಲ್ಲ ಎಂದು ಸುಪ್ರಿಂ ತಿಳಿಸಿದೆ,  ಹಾಗೂ ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವುದು ಸಾಧ್ಯವಿಲ್ಲ, ಕೇಂದ್ರದ ಪಾತ್ರ ಇರುತ್ತದೆ ಎಂದು ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಹೇಳಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಎಲ್ಲ ವಿಚಾರಗಳನ್ನೂ ರಾಷ್ಟ್ರಪತಿಗಳಿಗೆ ರವಾನಿಸುವುಗು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ಕೂಡ ಸಾಧ್ಯವಿಲ್ಲ ಎಂದು ಹೇಳಿದೆ. ಜೊತೆಗೆ ಸಾಮರಸ್ಯದಿಂದ ಕೆಲಸ ಮಾಡಿಕೊಂಡು ಹೋಗುವಂತೆ ಸುಪ್ರೀಂ ತಿಳಿಸಿದೆ.
ಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಉನ್ನತ ಪೀಠ, ಸಂವಿಧಾನಕ್ಕೆ ಬದ್ಧವಾಗಿ ಎಲ್ಲರೂ ಕಾರ್ಯನಿರ್ವಹಿಸಬೇಕು. ಅದು ಈ ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯಕೂಡ. ಅಂತೆಯೇ ದೆಹಲಿ ಲೆಫ್ಟಿನೆಂಟ್ ಗವರ್ನರ್ ಸ್ವತಂತ್ರ್ಯವಾಗಿ ಕಾರ್ಯನಿರ್ವಹಿಸಬೇಕು. ಎಲ್ಲ ವಿಚಾರಗಳನ್ನೂ ರಾಷ್ಟ್ರಪತಿಗಳಿಗೆ ರವಾನೆ ಮಾಡುವುದು ಸರಿಯಲ್ಲ. ಸಂವಿಧಾನದತ್ತ ತಮ್ಮ ಅಧಿಕಾರವನ್ನು ಅವರು ಸ್ವತಂತ್ರ್ಯವಾಗಿ ಚಲಾಯಿಸಬೇಕು. ಎಲ್ ಜಿ ಸರ್ಕಾರ ಪ್ರತಿರೋಧಕರಂತೆ ವರ್ತಿಸಬಾರದು ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com