ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿ: ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ.ಸಂತೋಶ್ ಹೆಗ್ಡೆ

ಜೂಜಾಡುವುದನ್ನು, ಕ್ರೀಡೆಗಳಲ್ಲಿ ಬೆಟ್ಟಿಂಗ್ ಕಟ್ಟುವುದನ್ನು ಕಾನೂನುಬದ್ಧಗೊಳಿಸುವ ಕಾನೂನು ಆಯೋಗದ ಶಿಫಾರಸ್ಸನ್ನು ಬೆಂಬಲಿಸಿರುವ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾ. ಎನ್ ಸಂತೋಷ್ ಹೆಗ್ಡೆ
ನ್ಯಾ.ಸಂತೋಶ್ ಹೆಗ್ಡೆ
ನ್ಯಾ.ಸಂತೋಶ್ ಹೆಗ್ಡೆ
ಬೆಂಗಳೂರು: ಜೂಜಾಡುವುದನ್ನು, ಕ್ರೀಡೆಗಳಲ್ಲಿ ಬೆಟ್ಟಿಂಗ್ ಕಟ್ಟುವುದನ್ನು ಕಾನೂನುಬದ್ಧಗೊಳಿಸುವ ಕಾನೂನು ಆಯೋಗದ ಶಿಫಾರಸ್ಸನ್ನು ಬೆಂಬಲಿಸಿರುವ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾ. ಎನ್ ಸಂತೋಷ್ ಹೆಗ್ಡೆ, ವೇಶ್ಯಾವಾಟಿಕೆಯನ್ನೂ ಕಾನೂನುಬದ್ಧಗೊಳಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. 
ವ್ಯಸನಗಳನ್ನು ಸರ್ಕಾರ, ಕಾನೂನಿನ ಮೂಲಕ ನಿರ್ನಾಮ ಮಾಡಲು ಸಾಧ್ಯವಿಲ್ಲ.  ಒಂದು ವೇಳೆ ಕಾನೂನಿನ ಮೂಲಕ ಇಂತಹ ವಿಷಯಗಳನ್ನು ನಿಯಂತ್ರಿಸಬಹುದು ಎಂದುಕೊಂಡರೆ ಅದು ತಪ್ಪಾಗುತ್ತದೆ ಎಂದು ನ್ಯಾ.ಹೆಗ್ಡೆ ಹೇಳಿದ್ದಾರೆ. ನೇರ ಹಾಗೂ ಪರೋಕ್ಷ ಕಾಯ್ದೆಯಡಿ ಜೂಜಾಡುವುದು, ಕ್ರೀಡೆಗಳಲ್ಲಿ ಬೆಟ್ಟಿಂಗ್ ಕಟ್ಟುವುದನ್ನು ಕಾನೂನುಬದ್ಧಗೊಳಿಸಬೇಕೆಂದು ಕಾನೂನು ಆಯೋಗ ಶಿಫಾರಸ್ಸು ಮಾಡಿತ್ತು. ಇದನ್ನು ಅತ್ಯುತ್ತಮ ಶಿಫಾರಸ್ಸು ಎಂದು ಹೇಳಿರುವ ಸಂತೋಷ್ ಹೆಗ್ಡೆ, ಕಾನೂನಿನ ಮೂಲಕ ಇಂತಹ ವಿಷಯಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಮಾಡಿದಲ್ಲಿ ಅಕ್ರಮ ವ್ಯವಸ್ಥೆಗಳು ಹೆಚ್ಚಾಗುತ್ತವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com