ಉನ್ನಾವೊ: ಅಂಗಲಾಚಿ ಬೇಡಿದರೂ ಬಿಡದ ಕಾಮುಕರು, ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ; ವಿಡಿಯೋ ವೈರಲ್

ತನ್ನನ್ನು ಬಿಟ್ಟು ಬಿಡುವಂತೆ ಅಂಗಲಾಚಿ ಬೇಡಿದರೂ ಬಿಡದ ಮೂವರು ಕಾಮುಕರು ಉತ್ತರ ಪ್ರದೇಶದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ...
ಮೂವರು ಕಾಮುಕರಿಂದ ಲೈಂಗಿಕ ದೌರ್ಜನ್ಯ
ಮೂವರು ಕಾಮುಕರಿಂದ ಲೈಂಗಿಕ ದೌರ್ಜನ್ಯ
ಉನ್ನಾವೋ: ತನ್ನನ್ನು ಬಿಟ್ಟು ಬಿಡುವಂತೆ ಅಂಗಲಾಚಿ ಬೇಡಿದರೂ ಬಿಡದ ಮೂವರು ಕಾಮುಕರು ಉತ್ತರ ಪ್ರದೇಶದ  ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ವಿಡಿಯೋ  ವೈರಲ್‌ ಆಗಿದೆ. 
ವಿಡಿಯೋದಲ್ಲಿ ಮಹಿಳೆಯು ತನ್ನ ಮೇಲೆ ಅತ್ಯಾಚಾರ ನಡೆಸದಂತೆ ಅವರಲ್ಲಿ ಭಯ್ಯಾ  ಐಸಾ ಮತ್‌ ಕರೋ' ಎಂದು ಗೋಗರೆಯುವುದು ಕೇಳಿ ಬರುತ್ತದೆ. ಹಾಗಿದ್ದರೂ ಆ ಮೂರೂ ನೀಚರು ಮಹಿಳೆಯ ಮೇಲೆ ದೌರ್ಜನ್ಯ ಮುಂದುವರಿಸಿದ್ದಾರೆ. ಜೊತೆಗೆ ಓರ್ವ ಇದನ್ನು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. 
ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆದ ಕೂಡಲೇ ಎಚ್ಚೆತ್ತ ಪೊಲೀಸರು  ಮೂವರು ಅತ್ಯಾಚಾರಿಗಳ ಪೈಕಿ ಇಬ್ಬರನ್ನು ಬಂಧಿಸಿದ್ದಾರೆ. ಮೂರನೇ ಆರೋಪಿ ಇನ್ನೂ ತಲೆ ಮರೆಸಿಕೊಂಡಿದ್ದಾರೆ. ಈ ವೈರಲ್‌ ವಿಡಿಯೋ ದ ಮೂಲವನ್ನು ಈಗ ಪೊಲೀಸರು ಶೋಧಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com