ಭಾರತೀಯ ಪ್ರವಾಸೋದ್ಯಮವನ್ನು ಉತ್ತೇಜಿಸಿ: ಅಮೆರಿಕಾದಲ್ಲಿರುವ ಪಟೇಲ್ ಸಮುದಾಯಕ್ಕೆ ಮೋದಿ ಕರೆ

ಅಮೆರಿಕಾದಲ್ಲಿ ನೆಲೆಸಿರುವ ಗುಜರಾತ್ ನ ಪಟೇಲ್ ಸಮುದಾಯದ ಜನ ಭಾರತೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಪ್ರಧಾನಿ ...
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಅಮೆರಿಕಾದಲ್ಲಿ ನೆಲೆಸಿರುವ ಗುಜರಾತ್ ನ ಪಟೇಲ್ ಸಮುದಾಯದ ಜನ ಭಾರತೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. 
ಅಮೆರಿಕಾದಲ್ಲಿ ಸೌರಾಷ್ಟ್ರ ಪಟೇಲ್ ಸಾಂಸ್ಕೃತಿಕ ಸಮಾಜ ಏರ್ಪಡಿಸಿದ ಸಮಾವೇಶದಲ್ಲಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಮೋದಿ, ಹೊಟೆಲ್ ಮೊಟೆಲ್ ಪಟೇಲ್ ವಾಲಾಸ್ ಎಂಬುದರ ಬಗ್ಗೆ ನಿಮಗೆ ತಿಳಿದಿರಬೇಕು. ನಿಮ್ಮಲ್ಲಿ ಒಬ್ಬರು ಐವರನ್ನು ಭಾರತಕ್ಕೆ ಬರುವಂತೆ ಪ್ರೇರೇಪಣೆ ನೀಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಹೋಟೆಲ್ ನಲ್ಲಿ ಅತಿಥಿಗಳು ಬಂದಾಗ ಅವರಿಗೆ ಭಾರತ ಪ್ರವಾಸೋದ್ಯಮದ ಬಗ್ಗೆ 5 ನಿಮಿಷಗಳ ವಿಡಿಯೋ ತೋರಿಸಿ, ಅವರು ಟಿವಿ ಆನ್ ಮಾಡಿದಾಗ ಭಾರತ ಏನು ಎಂಬುದನ್ನು ತಿಳಿಯಲಿ ಎಂದು ಹೇಳಿದ್ದಾರೆ.
ವಿದೇಶದಲ್ಲಿ ನೆಲೆಸಿರುವ ಎನ್ ಆರ್ ಐ ಗಳನ್ನು ಹೊಗಳಿರುವ ಪ್ರಧಾನಿ ಮೋದಿ, ಪ್ರಪಂಚದಾದ್ಯಂತ  ಭಾರತೀಯ ಪಾಸ್ ಪೋರ್ಟ್ ಗಳು ಹೆಚ್ಚುತ್ತಿದ್ದು  ದೇಶ ಹೆಮ್ಮೆ ಪಡುವಂತ ವಿಚಾರವಾಗಿದೆ ಎಂದು ಹೊಗಳಿದ್ದಾರೆ, 
1960 ರಲ್ಲಿ ಗುಜರಾತ್ ವಲಸಿಗರು ಅಮೆರಿಕಾ ಮೋಟೆಲ್ ಉದ್ಯಮಕ್ಕೆ ಕಾಲಿಟ್ಟಾಗಿನಿಂದ ಈ ಪಟೇಲ್ ಮೊಟೆಲ್ ಎಂಬ ಅದ್ಭುತ ಸೃಷ್ಟಿಯಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com