ಪಾಟ್ನಾ: ಬಿಹಾರದ ಸರನ್ ಜಿಲ್ಲೆಯ ಖಾಸಗಿ ಶಾಲೆಯ ಆವರಣದಲ್ಲಿ ಬಾಲಕಿಯ ಮೇಲೆ ನಡೆದಿದ್ದ ಗ್ಯಾಂಗ್ ರೇಫ್ ಗೆ ಸಂಬಂಧ ವಿಶೇಷ ತನಿಖಾ ತಂಡ (ಎಸ್ಐಟಿ) ಇದುವರೆಗೆ ಕನಿಷ್ಟ ಆರು ಮಂದಿಯನ್ನು ವಿಚಾರಣೆ ನಡೆಸಿದೆ.
ಬಾಲಕಿ ಸಾಮೂಹಿಕ ಅತ್ಯಾಚಾರ ಪ್ರಕರಣ ತನಿಖೆಗೆ ವಿಶೇಷ ತನಿಖಾ ದಳ ರಚಿಸಲಾಗಿದೆ. ಇದಾಗಲೇ ಎಸ್ಐಟಿ ಆರು ಮಂದಿಯ ವಿಚಾರಣೆ ನಡೆಸಿದೆ, ಉಳಿದ ಆರೋಪಿಗಳನ್ನು ಸಹ ಶೀಘ್ರವಾಗಿ ಬಂಧಿಸಲಾಗುವುದು ಎಂದು ಪೋಲೀಸ್ ಹೆಚ್ಚುವರಿ ನಿರ್ದೇಶಕ ಜನರಲ್ ಸಂಜೀವ್ ಕುಮಾರ್ ಸಿಂಘಾಲ್ ಹೇಳಿದರು.
ಘಟನೆಗೆ ಸಂಬಂಧಿಸಿ ಬಿಹಾರ ಪೊಲೀಸರು ಶಾಲಾ ಪ್ರಿನ್ಸಿಪಾಲ್ ಸೇರಿದಂತೆ ಆರು ಜನರನ್ನು ಶುಕ್ರವಾರ ಬಂಧಿಸಿದ್ದರು.ಸಂತ್ರಸ್ತ ಬಾಲಕಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ.
ಬಾಲಕಿಯ ತಂದೆ ಡಿಸೆಂಬರ್ 2017ರಲ್ಲಿ ಜೈಲು ಸೇರಿದಂದಿನಿಂದಲೂ ಶಾಲಾ ಮುಖ್ಯೋಪಾದ್ಯಾಯ ಸೇರಿ 15 ಮಂದಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ್ದರೆಂದು ಆಕೆಯ ತಂದೆ ಪೋಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.