ಮುಜುಗರಕ್ಕೀಡಾಗುತ್ತಿದ್ದ ವಧುವಿನ ಸಹಾಯಕ್ಕೆ ಮುಂದಾದ ವ್ಯಕ್ತಿಗೆ ಕಪಾಳಮೋಕ್ಷ, ವಿಡಿಯೋ ವೈರಲ್!

ಮದುವೆ ಸಮಾರಂಭಗಳು ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿಯಾಗುತ್ತದೆ ಎಂಬುದಕ್ಕೆ ಈ ವಿಡಿಯೋ ನೈಜ ಉದಾಹರಣೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಮದುವೆ ಸಮಾರಂಭಗಳು ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿಯಾಗುತ್ತದೆ ಎಂಬುದಕ್ಕೆ ಈ ವಿಡಿಯೋ ನೈಜ ಉದಾಹರಣೆ. 
ಮದುವೆ ಸಮಾರಂಭಗಳಲ್ಲಿ ವಧು-ವರರನ್ನು ಹಾಸ್ಯ ಮಾಡುವುದು, ರೇಗಿಸುವುದು, ತಮಾಷೆಗೆ ಎತ್ತಿಕೊಂಡು ಹಾರ ಹಾಕಿಸುವುದು ಇದೆಲ್ಲಾ ಸಾಮಾನ್ಯ. ಆದರೆ ಈ ಮದುವೆ ಮಂಟಪದಲ್ಲಿ ಆಗಿದ್ದು ಮಾತ್ರ ಬೇರೆ. ಹಿಂದೂ ಸಂಸ್ಕೃತಿಯಂತೆ ವಧು-ವರರು ಪರಸ್ಪರ ಹಾರ ಬದಲಿಸಿಕೊಳ್ಳುವುದು ಸಾಮಾನ್ಯ. ಇದನ್ನು ಸ್ವಲ್ಪ ಕಾಮಿಡಿ ಮಾಡುವ ಸಲುವಾಗಿ ಕೆಲವರು ವರನನ್ನು ಎತ್ತಿಕೊಂಡು ವಧುವನ್ನು ಆಟವಾಡಿಸುತ್ತಾರೆ. ಅಂತೆ ಇಲ್ಲಿ ಸಹ ವರನನ್ನು ಸಂಬಂಧಿಯೊಬ್ಬರು ಎತ್ತಿಕೊಂಡಿದ್ದಾರೆ. ಇದರಿಂದ ವಧು ವರನಿಗೆ ಹಾರಹಾಕಲು ಸಾಧ್ಯವಾಗಲಿಲ್ಲ. 
ಈ ವೇಳೆ ಮುಜುಗರಕ್ಕೀಡಾಗುತ್ತಿದ್ದ ವಧುವಿಗೆ ವ್ಯಕ್ತಿಯೊಬ್ಬ ಸಹಾಯಕ್ಕೆ ಬಂದಿದ್ದಾನೆ. ಹಿಂದೆ ಬಂದು ವಧುವನ್ನು ಎತ್ತಿಕೊಂಡು ವರನಿಗೆ ಹಾರ ಹಾಕಲು ಸಹಾಯ ಮಾಡಿದ್ದಾನೆ. ವರನಿಗೆ ಹಾರ ಹಾಕಿದ ನಂತರ ವ್ಯಕ್ತಿ ವಧುವನ್ನು ಇಳಿಸಿದ್ದಾನೆ. ಆ ವ್ಯಕ್ತಿಯನ್ನು ನೋಡಿದ ವಧು ಕೋಪಗೊಂಡ ಆತನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಆತ ಅಲ್ಲಿಂದ ಹೊರಟು ಹೋಗಿದ್ದಾನೆ. ವಧುವನ್ನು ಎತ್ತಿಕೊಂಡಿದ್ದು ಯಾರು? ವ್ಯಕ್ತಿಗೆ ವಧು ಹೊಡೆದಿದ್ದು ಯಾಕೆ? ಹೊಡೆಸಿಕೊಂಡ ನಂತರ ಆತ ಸುಮ್ಮನೆ ಹೋದದ್ದು ಯಾಕೆ? ಮದುವೆ ಎಲ್ಲಿ ನಡೆಯಿತು ಎಂಬ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ!
ಎರಡು ದಿನಗಳ ಹಿಂದೆ ಈ ವಿಡಿಯೋ ಅಪ್ ಲೋಡ್ ಆಗಿದ್ದು ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೆಲವರು ಹಾಸ್ಯಾತ್ಮಕ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ. 
ವಿಡಿಯೋ ಕೃಪೆ: YouTube

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com