11 ಮಂದಿ ನಿಗೂಢ ಆತ್ಮಹತ್ಯೆ ಪ್ರಕರಣ: 11 ಪೈಪ್ ಅಳವಡಿಸಿದ ಗಾರೆ ಕೆಲಸದಾತ ಹೇಳಿದ್ದೇನು?

ದೆಹಲಿಯ ಬುರಾರಿಯಲ್ಲಿ ಒಂದೇ ಕುಟುಂಬದ 11 ಸದಸ್ಯರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ತನಿಖೆ ಮುಂದುವರಿಸಿದ್ದು ಮನೆಗೆ ಪೈಪ್ ...
ಪೈಪ್ ಅಳವಿಸಿರುವ ಗೋಡೆ
ಪೈಪ್ ಅಳವಿಸಿರುವ ಗೋಡೆ
Updated on
ನವದೆಹಲಿ: ದೆಹಲಿಯ ಬುರಾರಿಯಲ್ಲಿ ಒಂದೇ ಕುಟುಂಬದ 11 ಸದಸ್ಯರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ  ದೆಹಲಿ ಪೊಲೀಸರು ತನಿಖೆ ಮುಂದುವರಿಸಿದ್ದು ಮನೆಗೆ ಪೈಪ್ ಅಳವಡಿಸಿದ ಗಾರೆ ಕೆಲಸದವನನ್ನು ಹಾಗೂ ಗುತ್ತಿಗೆದಾರ ಮತ್ತು ಆತನ ಮಗಳ ವಿಚಾರಣೆ ಮಾಡುತ್ತಿದ್ದಾರೆ.
ಭಾಟಿಯಾ ಕುಟುಂಬದ ಮೃತಪಟ್ಟ ಸದಸ್ಯರೊಬ್ಬರು ಸ್ವಯಂ ಘೋಷಿತ ದೇವ ಮಹಿಳೆ ಲಲಿತ್ ಎಂಬುವರನ್ನು ಭೇಟಿ ಮಾಡಿದ್ದರು, ಈ ಸಂಬಂಧ ಪೊಲೀಸರು ಗೀತಾ ಎಂಬಾಕೆಯನ್ನು ವಿಚಾರಣೆಗೊಳಪಡಿಸಿದ್ದಾರೆ. ಸುಮಾರು 2 ಗಂಟೆಗಳ ಕಾಲ ಆಕೆಯನ್ನು ವಿಚಾರಣೆಗೊಳಪಡಿಸಲಾಯಿತು.ಯ ಈ ವೇಳೆ ಆಕೆ ತನಗೂ ಅವರಿಗಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾಳೆ.
ಗೀತಾ ತಂದೆ ಕುನ್ವರ್ ಪಲ್,  ಭಾಟಿಯಾ ಕುಟುಂಬಸ್ಥರು ವಾಸಿಸುತ್ತಿದ್ದ  ಮನೆಗೆ 11 ಪೈಪ್ ಅಳವಡಿಸಿದ್ದ ಆತನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಮನೆ ನಿರ್ಮಾಣ ಮಾಡುವ ವೇಳೆ  ಕಿಟಕಿ ಅಳಡಿಸಲು ಸಾಧ್ಯವಾಗದ ಕಾರಣ  ವೆಂಟಿಲೇಶನ್ ಗಾಗಿ ಈ ಪೈಪ್ ಅಳ ವಡಿಸಲಾಗಿತ್ತು ಎಂದು ಹೇಳಿದ್ದಾವೆ.
ಪೊಲೀಸರು ಭಾಟಿಯಾ ಕುಟುಂಬದ ಸಂಬಂಧಿಕರು, ನೆರೆಹೊರೆಯವರು ಸೇರಿಗಂೆತ ಸುಮರು 100 ಮಂದಿಯನ್ನು ವಿಚಾರಿಸಿದ್ದಾರೆ. ಇತ್ತೀಚೆಗೆ ಗೀತಾ ಲಲಿತ್ ರನ್ನು ಭೇಟಿ ಮಾಡಿದ್ದಳು ಮತ್ತೆ ಜುಲೈ 10 ರಂದು ಭೇಟಿಯಾಗುವುದಾಗಿ ತಿಳಿಸಿದ್ದಳು, ನನಗೂ ಸಾವಿಗೂ ಸಂಬಂಧವಿಲ್ಲ, ಅವರಿಗೆ ನಾನು ಯಾವುದೇ ಎಸ್ಎಂಎಸ್ ಕೂಡ ಮಾಡಿಲ್ಲ ಎಂದು ಪೊಲೀಸರ ಬಳಿ ಹೇಳಿದ್ದಾಳೆ.
ಇನ್ನೂ ಗೀತಾ ತಂದೆ ಕುನ್ವರ್ ಪಾಲ್ ನನ್ನು ವಿಚಾರಣೆಗೊಳಪಡಿಸಿರುವ ಪೊಲೀಸರು ಖಾಲಿ ಗೋಡೆಗಳ ಮೇಲಿರುವ 11 ಪೈಪ್ ಗಳ ಬಗ್ಗೆ  ವಿಚಾರಣೆ ನಡೆಸಿದ್ದಾರೆ, ಗೋಡೆಯಲ್ಲಿ ಕಿಟಕಿ ಇಡಲು ಸಾಧ್ಯವಾಗದ ಕಾರಣ ವೆಂಟಿಲೇಷನ್ ಗಾಗಿ 11 ಪೈಪ್ ಹಾಕಲಾಗಿತ್ತು. 11 ಪೈಪ್ ಮತ್ತು 11 ರಾಡ್ ಆಕಸ್ಮಿಕವಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ,
ಭವಿಷ್ಯದಲ್ಲಿ ಬೇರೆ ಯಾವುದಾದರೂ ಕೆಲಸಗಳ ಉದ್ದೇಶವನ್ನಿಟ್ಟುಕೊಂಡು ಪಿವಿಸಿ ಪೈಪ್ ಗಳನ್ನು ಬಿಟ್ಟಿದ್ದಾರೆ ಎನ್ನಿಸುತ್ತದೆ. ಮನೆಯ ವಾಸ್ತುವಿಗಾಗಿ ಅವರು ಏನನ್ನಾದರೂ ಮಾಡಲು ಸಿದ್ಧರಿದ್ದರು.  ನಾನು ಕಳೆದ 22 ವರ್ಷಗಳಿಂದ ಭಾಟಿಯಾ ಕುಟುಂಬಸ್ಥರ ಸಂಪರ್ಕ ಇತ್ತು ಎಂದು ಹೇಳಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com