ಅಲ್ಪೇಶ್ ಥಾಕೂರ್, ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ
ದೇಶ
ಮಹಿಳೆ ಮನೆ ಮೇಲೆ ದಾಳಿ: ಹಾರ್ದಿಕ್ ಪಟೇಲ್, ಜಿಗ್ನೆಶ್ ಮೇವಾನಿ, ಅಲ್ಫೇಶ್ ಥಾಕೂರ್ ವಿರುದ್ಧ ಕೇಸ್
ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಹಿಳೆಯೊಬ್ಬ ಮನೆ ಮೇಲೆ ದಾಳಿ ನಡೆಸಿದ...
ಅಹಮದಾಬಾದ್: ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಹಿಳೆಯೊಬ್ಬ ಮನೆ ಮೇಲೆ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಗುಜರಾತ್ ಪಟಿದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಮತ್ತು ಗುಜರಾತ್ ಶಾಸಕರಾದ ಅಲ್ಪೇಶ್ ಥಾಕೂರ್ ಹಾಗೂ ಜಿಗ್ನೇಶ್ ಮೇವಾನಿ ಅವರ ವಿರುದ್ಧ ಶನಿವಾರ ಕೇಸ್ ದಾಖಲಿಸಲಾಗಿದೆ.
ಅಕ್ರಮ ಮದ್ಯೆ ಮಾರಾಟ ಜಾಲ ಬಹಿರಂಗಪಡಿಸುವುದಕ್ಕಾಗಿ ಕಾಂಗ್ರೆಸ್ ಶಾಸಕ ಥಾಕೂರ್, ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಹಾಗೂ ಹಾರ್ದಿಕ್ ಪಟೇಲ್ ಅವರು ನಿನ್ನೆ ತಮ್ಮ ಬೆಂಬಲಿಗರೊಂದಿಗೆ ಕಾಂಚನ ಬೆನ್ ಮಕ್ವಾನ ಅವರ ಮನೆ ಮೇಲೆ ದಾಳಿ ಮಾಡಿದ್ದರು.
ಈ ಸಂಬಂಧ ಕಾಂಚನ ಬೆನ್ ಅವರು ಈ ಮೂವರ ನಾಯಕರ ವಿರುದ್ಧ ಗಾಂಧಿನಗರದ ಸೆಕ್ಟರ್ 21 ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಹಾರ್ದಿಕ್ ಪಟೇಲ್, ಜಿಗ್ಗೇಶ್ ಮೇವಾನಿ ಮತ್ತು ಅಲ್ಪೇಶ್ ಥಾಕೂರ್, ಗಂಡಸರು ಮನೆಯಲ್ಲಿ ಇಲ್ಲದೆ ವೇಳೆ ತಮ್ಮ ಬೆಂಬಲಿಗರೊಂದಿಗೆ ನಮ್ಮ ಮನೆಗೆ ನುಗ್ಗಿದಲ್ಲದೆ ಮನೆಯಲ್ಲಿ ಎರಡು ಪೌಚ್ ದೇಶಿ ಮದ್ಯಗಳನ್ನು ತಂದಿಟ್ಟು, ಅಕ್ರಮ ಮದ್ಯೆ ಸಂಗ್ರಹಿಸಲಾಗಿದೆ ಎಂದು ಆರೋಪಿಸಿರುವುದಾಗಿ ಮಹಿಳೆ ದೂರಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ