ಮುಂಬೈ: ಜಲಾವೃತವಾಗಿದ್ದ ರಸ್ತೆಯಲ್ಲಿ ಹೋಗುತ್ತಿದ್ದಾಗ ರಸ್ತೆ ಗುಂಡಿಯಿಂದಾಗಿ ಬೈಕ್ ತಪ್ಪಿದೆ. ಈ ವೇಳೆ ಹಿಂಬದಿ ಕುಳಿತಿದ್ದು ಮಹಿಳೆ ಸೀಟಿನಿಂದ ಜಾರಿ ಬಿದ್ದಾಗ ಆಕೆಯ ಮೇಲೆ ಬಸ್ ಹರಿದಿದೆ.ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಥಾಣೆಯ ನಿವಾಸಿಯಾಗಿರುವ ಮನೀಸಾ ಬೋರ್ ತಮ್ ಪತಿ ಜೊತೆ ಮನೆಗೆ ತೆರಳುವಾಗ ದುರ್ಘಟನೆ ಸಂಭವಿಸಿದೆ, ಮಳೆ ಬರುತ್ತಿದ್ದ ಕಾರಣ ಮನೀಶಾ ಕೊಡೆ ಹಿಡಿದು ಕೂತಿದ್ದರು.
ಶಿವಾಜಿ ಚೌಕ್ ತಲುಪಿದ ವೇಳೆ ರಸ್ತೆ ಗುಂಡಿಯಿಂದಾಗಿ ಬೈಕ್ ವಾಲಿದೆ. ಆಗ ಮನೀಶಾ ಕೆಳಗೆ ಬಿದ್ದಿದ್ದಾರೆ, ಇದೇ ವೇಳೆ ವೇಗವಾಗಿ ಬರುತ್ತಿದ್ದ ಬಸ್ ಮನೀಶಾ ಮೈಮೇಲೆ ಹರಿದಿದೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮುಂಬಯಿಯ 26 ಹವಾಮಾನ ಕೇಂದ್ರಗಳು ಹಾಗೂ ಅದರ 14 ಉಪ ಕೇಂದ್ರಗಳಲ್ಲಿ 100 ಮಿಮೀಟರ್ ಗೂ ಹೆಚ್ಚು ಮಳೆ ದಾಖಲೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ .