ಸಾಂದರ್ಭಿಕ ಚಿತ್ರ
ದೇಶ
ರನ್ ವೇ ಬಿಟ್ಟು ಹೊರ ನುಗ್ಗಿದ ಏರ್ ಇಂಡಿಯಾ ವಿಮಾನ, ತಪ್ಪಿದ ಭಾರಿ ಅನಾಹುತ
ಮುಂಬೈ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವೊಂದು ಲ್ಯಾಂಡಿಂಗ್....
ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವೊಂದು ಲ್ಯಾಂಡಿಂಗ್ ವೇಳೆ ರನ್ ವೇ ಬಿಟ್ಟು ಹೊರ ನುಗ್ಗಿದ ಘಟನೆ ನಡೆದಿದೆ.
ಅದೃಷ್ಟವಶಾತ್ ವಿಮಾನಕ್ಕೆ ಮತ್ತು ರನ್ ವೇಗೆ ಯಾವುದೇ ಹಾನಿಯಾಗದೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿಜಯವಾಡ-ಮುಂಬೈ ಏರ್ ಇಂಡಿಯಾ ಏಕ್ಸ್ ಪ್ರೆಸ್ ವಿಮಾನ ಐಎಕ್ಸ್ 213 ಭಾರಿ ಮಳೆಯ ನಡುವೆಯೇ ಇಂದು ಮಧ್ಯಾಹ್ನ 2.50ರ ಸುಮಾರಿಗೆ ಪ್ರಮುಖ ರನ್ ವೇ 27ರ ಬದಲು 14ರಲ್ಲಿ ಲ್ಯಾಂಡ್ ಆಗಿದ್ದು, ಕೊನೆಯಲ್ಲಿ ನಿಲ್ಲಿಸಲಾಗಿದೆ ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ