ಮೂರು ರಾಜ್ಯಗಳ ವಿಧಾನಸಭಾ ಚುನಾವಣೆ : ಬಿಎಸ್ ಪಿಯೊಂದಿಗೆ ಕಾಂಗ್ರೆಸ್ ಮೈತ್ರಿ

2019ರ ಮಹಾಮೈತ್ರಿ ಕಲ್ಪನೆ ಮನಸ್ಸಿನಲ್ಲಿಟ್ಟುಕೊಂಡು ಕಾಂಗ್ರೆಸ್, ರಾಜಸ್ತಾನ, ಮಧ್ಯಪ್ರದೇಶ, ಹಾಗೂ ಛತ್ತೀಸ್ ಗಢದಲ್ಲಿ ಈ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಬಿಎಸ್ ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ.
ಕಾಂಗ್ರೆಸ್ ಚಿಹ್ನೆ
ಕಾಂಗ್ರೆಸ್ ಚಿಹ್ನೆ

ನವದೆಹಲಿ: 2019ರ ಮಹಾಮೈತ್ರಿ ಕಲ್ಪನೆ ಮನಸ್ಸಿನಲ್ಲಿಟ್ಟುಕೊಂಡು ಕಾಂಗ್ರೆಸ್,  ರಾಜಸ್ತಾನ, ಮಧ್ಯಪ್ರದೇಶ, ಹಾಗೂ ಛತ್ತೀಸ್ ಗಢದಲ್ಲಿ ಈ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ  ಬಿಎಸ್ ಪಿಯೊಂದಿಗೆ ಮೈತ್ರಿ  ಮಾಡಿಕೊಳ್ಳಲು ನಿರ್ಧರಿಸಿದೆ.

ಈ ರಾಜ್ಯಗಳಲ್ಲಿನ ಸೀಟು ಹಂಚಿಕೆ ಹೊಂದಾಣಿಕೆ ಸಂಬಂಧ  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ , ಆ ರಾಜ್ಯಗಳ ಪಕ್ಷದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಿದ್ದಾರೆ  ಎಂದು ಮೂಲಗಳಿಂದ ತಿಳಿದುಬಂದಿದೆ.

ಜಾತ್ಯತೀತ ಮತಗಳು ಛಿದ್ರಗೊಳ್ಳದಂತೆ ನೋಡಿಕೊಳ್ಳಬೇಕೆಂದುಕೊಂಡಿರುವ ಕಾಂಗ್ರೆಸ್  ಮಹಾಮೈತ್ರಿ ಸೇರುವ ತವಕದಲ್ಲಿದೆ. ಪಕ್ಷದಲ್ಲಿನ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಒಂದೆರಡು ದಿನಗಳಲ್ಲಿ ರಾಹುಲ್ ಗಾಂಧಿ  ಮೂರು ರಾಜ್ಯಗಳ ಪಕ್ಷದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಒಂದು ರಾಜ್ಯದ ಬಿಎಸ್ ಪಿ ಪಕ್ಷದ ಮುಖ್ಯಸ್ಥರೊಬ್ಬರು ತಿಳಿಸಿದ್ದಾರೆ.

ಛತ್ತೀಸ್ ಗಢದಲ್ಲಿ ಬಿಎಸ್ ಪಿಯ ಒಬ್ಬರು ಶಾಸಕರಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಎಸ್ ಪಿ 22 ಕ್ಷೇತ್ರಗಳಲ್ಲಿ  300 ರಿಂದ 35 ಸಾವಿರವರೆಗೂ ಮತ ಪಡೆದುಕೊಂಡಿತ್ತು. ಈ 22 ಕ್ಷೇತ್ರಗಳಲ್ಲಿ ಕಾಂಗ್ರೆಸಿನ ಹಾಲಿ 12 ಶಾಸಕರಿದ್ದಾರೆ. ಈ ಕ್ಷೇತ್ರಗಳನ್ನು ಬಿಎಸ್ ಪಿಗೆ ಬಿಟ್ಟುಕೊಟ್ಟರೆ ಮಾತುಕತೆಯಂತೆ 12 ಸೀಟುಗಳು ಉಳಿದುಕೊಳ್ಳಲಿವೆ. ಬಿಜೆಪಿ ಪ್ರಬಲವಿರುವ ಕಡೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಡುವಂತೆ ಬಿಎಸ್ ಪಿ ಕಾಂಗ್ರೆಸ್ ನ್ನು ಒತ್ತಾಯಿಸಿದೆ.

 ಆದಾಗ್ಯೂ, ಉಳಿದ ಎರಡು ರಾಜ್ಯಗಳಿಗೆ ಹೋಲಿಸಿದ್ದರೆ ಮಧ್ಯ ಪ್ರದೇಶದಲ್ಲಿ ಬಿಎಸ್ ಪಿ  ಪ್ರಾಬಲ್ಯ ಹೊಂದಿದೆ. ಕಾಂಗ್ರೆಸ್ ನೊಂದಿಗೆ ಹೆಚ್ಚಿನ ಚೌಕಾಸಿಯನ್ನು ಇಲ್ಲಿ ನಡೆಸಬಹುದು.ಮಾಯಾವತಿ ಜೊತೆಗೆ ಸೀಟು ಹೊಂದಾಣಿಕೆ ಸಂಬಂಧ ಮಾತುಕತೆ ನಡೆಯುತ್ತಿದೆ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಮಲ್ ನಾಥ್ ಇತ್ತೀಚಿಗೆ ಹೇಳಿಕೆ ನೀಡಿದ್ದರು.

2013ರಲ್ಲಿ ರಾಜಸ್ತಾನದಲ್ಲಿ ನಡೆದ ಚುನಾವಣೆಯಲ್ಲೂ ಬಿಎಸ್ಪಿ 200 ಕ್ಷೇತ್ರಗಳ ಪೈಕಿ 195 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಆದರೆ. ಕೇವಲ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಶೇ. 3.4 ರಷ್ಟು ಶೇಕಡವಾರು ಮತಗಳಿಕೆ ಪಡೆದುಕೊಂಡಿತ್ತು. ಕಾಂಗ್ರೆಸ್ ಮೈತ್ರಿಯೊಂದಿಗೆ ಈ ಬಾರಿಗೆ ಬಿಎಸ್ಪಿ ಅತಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಎದುರು ನೋಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com