ಒಂದು ದೇಶ, ಒಂದು ಚುನಾವಣೆಗೆ ಬಿಜೆಡಿ, ವೈಎಸ್ ಆರ್ ಕಾಂಗ್ರೆಸ್ ಬೆಂಬಲ

ಕೇಂದ್ರ ಕಾನೂನು ಆಯೋಗ ಮಹತ್ವಾಕಾಂಕ್ಷಿ ನಿರ್ಧಾರ ಒಂದು ದೇಶ, ಒಂದು ಚುನಾವಣೆಗೆ ಬಿಜೆಡಿ ಮತ್ತು ವೈಎಸ್ ಆರ್ ಕಾಂಗ್ರೆಸ್ ಪಕ್ಷಗಳು ಬೆಂಬಲ ಸೂಚಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕೇಂದ್ರ ಕಾನೂನು ಆಯೋಗ ಮಹತ್ವಾಕಾಂಕ್ಷಿ ನಿರ್ಧಾರ ಒಂದು ದೇಶ, ಒಂದು ಚುನಾವಣೆಗೆ ಬಿಜೆಡಿ ಮತ್ತು ವೈಎಸ್ ಆರ್ ಕಾಂಗ್ರೆಸ್ ಪಕ್ಷಗಳು ಬೆಂಬಲ ಸೂಚಿಸಿವೆ.
ಸತತ ನಾಲ್ಕು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರ ಕಾನೂನು ಆಯೋಗದ ಸಭೆಯಲ್ಲಿ ಇಂದು ಬಿಜೆಡಿ ಮತ್ತು ವೈಎಸ್ ಆರ್ ಕಾಂಗ್ರೆಸ್ ಪಕ್ಷ ಒಂದು ದೇಶ, ಒಂದು ಚುನಾವಣೆಗೆ ಬೆಂಬಲ ನೀಡಿವೆ. ಆ ಮೂಲಕ ಆಯೋಗದ ನಿರ್ಧಾರಕ್ಕೆ ಒಟ್ಟು 6 ಪಕ್ಷಗಳು ಬೆಂಬಲ ನೀಡಿದ್ದು, ಬಿಜೆಡಿ. ವೈಎಸ್ ಆರ್ ಕಾಂಗ್ರೆಸ್, ಎನ್ ಡಿಎ ಮೈತ್ರಿಕೂಟದ ಶಿರೋಮಣಿ ಅಕಾಲಿ ದಳ, ಎಐಎಡಿಎಂಕೆ, ಸಮಾಜವಾದಿ ಪಕ್ಷ ಮತ್ತು ಟಿಆರ್ ಎಸ್ ಪಕ್ಷಗಳು ಈಗಾಗಲೇ ಬೆಂಬಲ ನೀಡಿವೆ. 
ಉಳಿದಂತೆ 9 ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಬಿಜೆಪಿ ಮೈತ್ರಿ ಪಕ್ಷ ಗೋವಾ ಫಾರ್ವರ್ಡ್ ಪಾರ್ಟಿ ಆಯೋಗದ ನಿರ್ಧಾರವನ್ನು ವಿರೋಧಿಸಿದ್ದು, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಡಿಎಂಕೆ, ಟಿಡಿಪಿ, ಸಿಪಿಐ, ಸಿಪಿಐಎಂ, ಫಾರ್ವರ್ಡ್ ಬ್ಲಾಕ್, ಜೆಡಿಎಸ್ ವಿರೋಧ ವ್ಯಕ್ತಪಡಿಸಿವೆ. ಇನ್ನು ಆಯೋಗದ ಕಲ್ಪನೆಗೆ ಬಿಜೆಪಿ ಸಹಮತ ಸೂಚಿಸಿದೆಯಾದರೂ ಇದರ ಅನುಷ್ಠಾನಕ್ಕೆ ಸಮಯಾವಕಾಶ ಬೇಕು ಎಂದು ಹೇಳುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಿದೆ. 
ಆದರೆ ಪ್ರಮುಖ ವಿಪಕ್ಷ ಕಾಂಗ್ರೆಸ್ ಪಕ್ಷ ಮಾತ್ರ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆಯೋಗದ ನಿರ್ಧಾರವೇ ಅಸಂವಿಧಾನಿಕವಾದದ್ದು ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ. ಆಯೋಗದ ಕಲ್ಪನೆ ಪ್ರಜಾಪ್ರಭುತ್ವ ಮೂಲ ಕಲ್ಪನೆಗೆ ಧಕ್ಕೆ ತರುತ್ತದೆ. ದೇಶದ ಪ್ರತೀಯೊಬ್ಬ ನಾಗರಿಕನಿಗೂ ತನ್ನ ಪ್ರಜಾ ಪ್ರತಿನಿಧಿಯನ್ನು ಆರಿಸುವ ಹಕ್ಕಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com