ಬ್ಯಾಂಕ್ ಗೆ 136 ಕೋಟಿ ರು. ವಂಚನೆ ಪ್ರಕರಣ: 3 ಕಂಪನಿಗಳ ವಿರುದ್ಧ ಸಿಬಿಐ ಕೇಸ್ ದಾಖಲು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ವಂಚಿಸಿದ ಹಿನ್ನೆಲೆಯಲ್ಲಿ ಮುಂಬೈ ಮೂಲದ ಕಂಪನಿಗಳ ವಿರುದ್ದ ಸಿಬಿಐ ಪ್ರತ್ಯೇಕ ಕೇಸ್ ದಾಖಲಿಸಿದೆ..
ಸಿಬಿಐ(ಸಂಗ್ರಹ ಚಿತ್ರ)
ಸಿಬಿಐ(ಸಂಗ್ರಹ ಚಿತ್ರ)
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ವಂಚಿಸಿದ ಹಿನ್ನೆಲೆಯಲ್ಲಿ ಮುಂಬೈ ಮೂಲದ ಕಂಪನಿಗಳ ವಿರುದ್ದ  ಸಿಬಿಐ ಪ್ರತ್ಯೇಕ ಕೇಸ್ ದಾಖಲಿಸಿದೆ. ಎಸ್ ಬಿಐ ಗೆ 136 ಕೋಟಿ ರು ವಂಚನೆ ಮಾಡಲಾಗಿದೆ.
ಟಾಪ್ ವರ್ತ್ ಪೈಪ್ಸ್ ಅಂಡ್ ಟ್ಯೂಬ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾದ ಅಭಯ್ ಲೋಧಾ, ಶಿಶಿರ್ ಶಿವಾಜಿ ಹಿರಯ್, ಹರ್ಷರಾಜ್, ಶಾಂತಿಲಾಲ್ ಬಾಗ್ಮರ್ ವಿರುದ್ಧ ಸಿಬಿಐ ಒಂದು ಕೇಸ್ ದಾಖಲಿಸಿದೆ.
ಡೆಪ್ಯುಟಿ ಮ್ಯಾನೇಜರ್ ಗಳಾದ ತ್ಯಾಗರಾಜುಐನ್ನನಾಮೆಲ್ಲರಿ, ವಿಲಾಸ್ ನರಹರ್ ಅಹಿರಾ, ಮಧುರಾ ಸಾವಂತ್ ಅವರು 56.81 ಕೋಟಿ ರು ವಂಚನೆ ಮಾಡಿದ್ದು ಅವರ ವಿರುದ್ಧ ಕೂಡ ಕೇಸು ದಾಖಲಿಸಲಾಗಿದೆ.
ಮಹೀಪ್ ಮಾರ್ಕೆಂಟಿಂಗ್ ಪ್ರೈವೇಟ್ ಕಂಪನಿ ವಿರುದ್ಧ 2ನೇ ಕೇಸು ದಾಖಲಿಸಲಾಗಿದೆ, ನಿರ್ದೇಶಕರುಗಳಾದ ಗಜೇಂದ್ರ ಸಂದಿಮ್, ಹೇಮಂತ್ ಸಾಂಘ್ವಿ ವಿರುದ್ಧ ಕೇಸ್ ದಾಖಲಾಗಿದೆ, 
ಇನ್ನೂ ಹರ್ಷ ಸ್ಟೀಲ್ ಕಂಪನಿ ವಿರುದ್ಧ 3ನೇ ಕೇಸ್ ದಾಖಲಾಗಿದ್ದು, ನಿರ್ದೇಶಕರುಗಳಾದ, ಚೇತನ್ ಜಿತೇಂದ್ರ ಮೆಹ್ತಾ, ಮಹದೇವ ರಾಮಚಂದ್ರ ಶೃಂಗಾರೆ ಮತ್ತಿತರ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ, 
ಸ್ಟೇಟ್ ಬ್ಯಾಂಕ್ ಆಫ್  ಇಂಡಿಯಾ ಲೆಟರ್ಸ್ ಆಫ್ ಕ್ರೆಡಿಟ್ ಬಳಸಿಕೊಂಡು, ಬಿಲ್ ಡಿಸ್ಕೌಂಟ್ ಸೌಲಭ್ಯ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಬಿಲ್ ಗಳನ್ನು ಬ್ಯಾಂಕ್ ಗಳಿಗೆ ವಾಪಸ್ ನೀಡಲಾಗಿದೆ. ಕಂಪನಿಗಳಿಂದ ಬ್ಯಾಂಕ್ ಹಗಮ ದುರುಪಯೋಗ ಹಿನ್ನೆಲೆಯಲ್ಲಿ ದೂರು ದಾಖಲಿಸಿಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಆಂತರಿಕ ವಿಚಾರಣೆ ನಡೆದಾಗ,  ಅಲವು ಅಕ್ರಮಗಳು ಬೆಳಕಿಗೆ ಬಂದಿವೆ, ಮುಂಬಯಿಯ 17 ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, ದಾಖಲಾತಿಗಳನ್ನು ವಶ ಪಡಿಸಿಕೊಳ್ಳಲಾಗಿದೆ, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com