ಶ್ರೇಷ್ಠತೆ ಸ್ಥಾನಮಾನ ವಿವಾದ: ಜಿಯೋ ಗಾಗಿ ಅಂತಿಮ ಗಡುವು ವಿಸ್ತರಣೆ ಮಾಡಿದ್ದ ಯುಜಿಸಿ!

ಇನ್ನೂ ಸ್ಥಾಪನೆಯೇ ಆಗದ ಜಿಯೋ ಶಿಕ್ಷಣ ಸಂಸ್ಥೆಗೆ ಶ್ರೇಷ್ಠ ಶಿಕ್ಷಣ ಸಂಸ್ಥೆ ಸ್ಥಾನಮಾನ ನೀಡಿದ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಕೇಂದ್ರ ಸರ್ಕಾರದ ಮತ್ತೊಂದು ಯಡವಟ್ಟು ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಇನ್ನೂ ಸ್ಥಾಪನೆಯೇ ಆಗದ ಜಿಯೋ ಶಿಕ್ಷಣ ಸಂಸ್ಥೆಗೆ ಶ್ರೇಷ್ಠ ಶಿಕ್ಷಣ ಸಂಸ್ಥೆ ಸ್ಥಾನಮಾನ ನೀಡಿದ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಕೇಂದ್ರ ಸರ್ಕಾರದ ಮತ್ತೊಂದು ಯಡವಟ್ಟು ಬೆಳಕಿಗೆ ಬಂದಿದೆ.
ಜಿಯೋ ಶಿಕ್ಷಣ ಸಂಸ್ಥೆಗೆ ಅನುವು ಮಾಡಿಕೊಡಲು ಯುಜಿಸಿ ತನ್ನ ಅಂತಿಮ ಗಡವನ್ನು ವಿಸ್ತರಣೆ ಮಾಡಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಶ್ರೇಷ್ಠ ಶಿಕ್ಷಣ ಸಂಸ್ಥೆಗಳಿಗೆ 2017ರ ಸೆಪ್ಚೆಂಬರ್ 12ರಂದು ಅರ್ಜಿ ಅಹ್ವಾನ ಮಾಡಲಾಗಿತ್ತು. ಅಲ್ಲದೆ ಅರ್ಜಿ ಕಳುಹಿಸಲು 90 ದಿನಗಳ ಕಾಲಾವಾಕಾಶ ನೀಡಲಾಗಿತ್ತು. ಆದರೆ ಅಂತಿಮ ಗಡುವು ಹತ್ತಿರ ಬಂದರೂ ಜಿಯೋ ಶಿಕ್ಷಣ ಸಂಸ್ಥೆ ಅರ್ಜಿ ಸಲ್ಲಿಕೆ ಮಾಡುವುದಿರಲಿ, ಕನಿಷ್ಠ ಪಕ್ಷ ಅದಕ್ಕೆ ಬೇಕಾದ ಕಾಗದ ಪತ್ರಗಳನ್ನೂ ಕೂಡ ಸಿದ್ಧತೆ ಮಾಡಿಕೊಂಡಿರಲಿಲ್ಲ.
ಅಷ್ಟು ಹೊತಿಗಾಗಲೇ ಯುಜಿಸಿ 100 ಅಧಿಕ ಶಿಕ್ಷಣ ಸಂಸ್ಥೆಗಳು ತಮ್ಮ ತಮ್ಮ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದವು. ಹೀಗಿದ್ದರೂ ಕೇಂದ್ರ ಸರ್ಕಾರ ಅಂತಿಮ ಗಡುವು ವಿಸ್ತರಣೆ ಮಾಡುವಂತೆ ಯುಜಿಸಿ ಮೇಲೆ ಒತ್ತಡ ಹೇರಿ ಅಂತಿಮ ಗಡವು ಕೊನೆಗೊಳ್ಳಲು ಕೆಲವೇ ದಿನಗಳು ಬಾಕಿ ಇರುವಾಗ ಮತ್ತೆ ಅಂತಿಮ ಗಡುವು ವಿಸ್ತರಣೆ ಮಾಡಿತ್ತು ಎಂದು ಯುಜಿಸಿ ಮೂಲಗಳು ತಿಳಿಸಿವೆ. ರಿಲಯನ್ಸ್ ಫೌಂಡೇಶನ್ ಜಿಯೋ ಶಿಕ್ಷಣ ಸಂಸ್ಥೆಗಾಗಿಯೇ ಈ ಗಡುವು ವಿಸ್ತರಣೆ ನಡೆದಿದೆ ಎಂದು ಆರೋಪಿಸಲಾಗುತ್ತಿದೆ.
ಜಿಯೋ ಶಿಕ್ಷಣ ಸಂಸ್ಥೆ ಅರ್ಜಿ ಸಲ್ಲಿಸಿದ ಬಳಿಕ ಜಿಯೋ ಶಿಕ್ಷಣ ಸಂಸ್ಥೆಯೂ ಸೇರಿದಂತೆ ನಿನ್ನೆ ಖಾಸಗಿಯ ಮೂರು ಮತ್ತು ಸರ್ಕಾರಿ 3 ಶಿಕ್ಷಣ ಸಂಸ್ಥೆಗಳಿಗೆ ಶ್ರೇಷ್ಠ ಶಿಕ್ಷಣ ಸಂಸ್ಥೆಗಳು ಎಂಬ ಸ್ಥಾನಮಾನ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com