ಅಶಿಸ್ತು ಸಹಿಸಲಾಗದು: ಯೋಧರಿಗೆ ಸೇನಾ ಮುಖ್ಯಸ್ಥ ರಾವತ್ ಎಚ್ಚರಿಕೆ

ದೇಶದ ಎಲ್ಲಾ ಮಾದರಿಯ ಸೇನಾ ಪಡೆಗಳು ಶಿಸ್ತಿನ ನಿಬಂಧನೆಗೆ ಒಳಪಡಬೇಕು. ಒಂದು ವೇಳೆ ಶಿಸ್ತು ಉಲ್ಲಂಘಿಸಿದರೆ...
ಬಿಪಿನ್ ರಾವತ್
ಬಿಪಿನ್ ರಾವತ್
ನವದೆಹಲಿ: ದೇಶದ ಎಲ್ಲಾ ಮಾದರಿಯ ಸೇನಾ ಪಡೆಗಳು ಶಿಸ್ತಿನ ನಿಬಂಧನೆಗೆ ಒಳಪಡಬೇಕು. ಒಂದು ವೇಳೆ ಶಿಸ್ತು ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಎಚ್ಚರಿಕೆ ನೀಡಿದ್ದಾರೆ.
ರಾವತ್ ಅವರು ಈ ಸಂಬಂಧ ಕಳೆದ ವಾರ ದೇಶದ 12 ಲಕ್ಷ ಸೈನಿಕರಿಗೆ ನಿರ್ದೇಶನ ನೀಡಿದ್ದು, ಸೇನಾ ಕ್ಯಾಂಟೀನ್ ಗಳಲ್ಲಿ ಮದ್ಯಪಾನ, ದಿನಸಿ ಸಾಮಾಗ್ರಿಗಳ ದುರ್ಬಳಕೆ ತಡೆಯುವುದರ ಜತೆಗೆ ಸೈನಿಕರು ಅನಾರೋಗ್ಯಕರ ಆಹಾರಗಳ ಬದಲು ಆರೋಗ್ಯಕರ ಆಹಾರಗಳನ್ನು ಬಳಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 ಸೇನಾ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತಡೆಯಲು ಪಿಂಚಣಿ ಕಡಿತ, ಕೆಲಸದಿಂದ ತೆಗೆದುಹಾಕುವುದು ಸೇರಿದಂತೆ ಅನೇಕ ಶಿಸ್ತು ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ರಾವತ್ ಎಚ್ಚರಿಕೆ ನೀಡಿದ್ದಾರೆ. 
ಬಿಪಿನ್ ರಾವತ್ ಅವರು ಸೇನೆಯ ಆಂತರಿಕ ವಲಯಗಳಲ್ಲಿ ಈ ನಿರ್ದೇಶನಗಳನ್ನು ನೀಡಿದ್ದು, ಅನೇಕ ಹಿರಿಯ ಸೇನಾಧಿಕಾರಿಗಳಲ್ಲಿ ಇದು ತಲ್ಲಣ ಸೃಷ್ಟಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com