ತೂಕ ಕಡಿಮೆ ಶಸ್ತ್ರಚಿಕಿತ್ಸೆ ಜಯಲಲಿತಾಗೆ ಇಷ್ಟವಿರಲಿಲ್ಲ- ವೈದ್ಯರ ಹೇಳಿಕೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವು ಪ್ರಕರಣದ ತನಿಖೆ ನಡೆಯುತ್ತಿದ್ದು, ತೂಕ ಕಡಿಮೆ ಶಸ್ತ್ರಚಿಕಿತ್ಸೆಯನ್ನು ಜಯಲಲಿತಾ ವಿರೋಧಿಸುತ್ತಿದ್ದರು ಎಂದು ಏಕ ಸದಸ್ಯ ತನಿಖಾ ಸಮಿತಿಯ ಮುಂದೆ ವೈದ್ಯರು ಹೇಳಿಕೆ ನೀಡಿದ್ದಾರೆ.
ಜಯಲಲಿತಾ
ಜಯಲಲಿತಾ

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವು ಪ್ರಕರಣದ ತನಿಖೆ ನಡೆಯುತ್ತಿದ್ದು, ತೂಕ ಕಡಿಮೆ ಶಸ್ತ್ರಚಿಕಿತ್ಸೆಯನ್ನು ಜಯಲಲಿತಾ ವಿರೋಧಿಸುತ್ತಿದ್ದರು. ಡಯಟ್ ಮುೂಲಕವೇ ತೂಕ ಕಡಿಮೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದರು ಎಂದು ಏಕ ಸದಸ್ಯ ತನಿಖಾ ಸಮಿತಿಯ ಮುಂದೆ ವೈದ್ಯರು ಹೇಳಿಕೆ ನೀಡಿದ್ದಾರೆ.

ಜಯಲಲಿತಾ ಅವರ  ಶಸ್ತ್ರಚಿಕಿತ್ಸೆ ಬೇಡ ಎನ್ನುತ್ತಿದ್ದರು. ನಿಯಮಿತ ಆಹಾರದ ಮೂಲಕವೇ ತೂಕ ಇಳಿಸಿಕೊಳ್ಳುವುದಾಗಿ ಹೇಳುತ್ತಿದ್ದರು ಎಂದು ಅಡ್ಡ ಪರೀಕ್ಷೆಯ ಸಮಯದಲ್ಲಿ, ಪ್ರಮುಖ ಆಸ್ಪತ್ರೆಯೊಂದರಲ್ಲಿರುವ ಮಧುಮೇಹ ವೈದ್ಯೆ  ಡಾ. ಜಯಶ್ರೀ ಗೋಪಾಲ್  ಹೇಳಿಕೆ ನೀಡಿದ್ದಾರೆ.

ಜಯಲಲಿತಾ ಆಪ್ತೆ ವಿ. ಕೆ. ಶಶಿಕಲಾ ಪರ ವಕೀಲ ಎನ್, ರಾಜ ಸಂತೊರು ಪಾಂಡಿಯನ್  ನಡೆಸಿದ ಅಡ್ಡ ಪರೀಕ್ಷೆ ವೇಳೆಯಲ್ಲಿ , ಜಯಲಲಿತಾಗೆ   ತೂಕ ಕಡಿಮೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದರಿಂದ  ನಡೆದಾಡಲು ಸುಲಭವಾಗುತ್ತದೆ. ಥೈರಾಡ್ ನಂತಹ ಮಾನಸಿಕ ಯಾತನೆಯಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಿದ್ದರು

 ಆದಾಗ್ಯೂ, ಜಯಲಲಿತಾ  ಡಯಟ್ ಮೂಲಕವೇ   ತೂಕ ಕಡಿಮೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದರು.   ದೈಹಿಕವಾಗಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಮರ್ಥ್ಯ ತನ್ನಗಿಲ್ಲ ಎಂದು ಹೇಳುತ್ತಿದ್ದರು ಎಂದು ವೈದ್ಯರು ಹೇಳಿಕೆ ನೀಡಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

2016ರಲ್ಲಿ ನಡೆದ ಉಪಚುನಾವಣೆಯಲ್ಲಿ  ಎಐಎಡಿಎಂಕೆ  ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ  ಆಸ್ಪತ್ರೆಯಲ್ಲಿ ಇರಬೇಕಾದರೆ ಜಯಲಲಿತಾ ಮಿತಿಯಲ್ಲಿಯೇ ಸ್ವೀಟ್ ತಿಂದಿದ್ದರು ಎಂದು ಪಾಂಡಿಯನ್  ಸುದ್ದಿಗಾರರಿಗೆ ತಿಳಿಸಿದರು.

 ಡಾ. ಜಯಶ್ರೀ, ಡಾ. ಡಿ. ಶಾಂತರಾಮ್ ಹೊರತುಪಡಿಸಿ , ಸಾರ್ವಜನಿಕ ಬ್ಯಾಂಕಿನ ಅಧಿಕಾರಿಗಳನ್ನು ನಿನ್ನೆ ಅಡ್ಡ ಪರೀಕ್ಷೆ ನಡೆಸಲಾಗಿದೆ. ಡಾ. ಡಿ ಶಾಂತರಾಮ್ ನೀಡಿದ ಹೇಳಿಕೆ ಪ್ರಕಾರ ಶಶಿಕಲಾ  ಜಯಲಲಿತಾ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದರು ಎಂದು ವಕೀಲರು ಹೇಳಿದ್ದಾರೆ.
 ಡಾ. ಶಾಂತರಾಮ್  ಅಪೋಲೋ ಆಸ್ಪತ್ರೆಯ ವೈದ್ಯರಾಗಿದ್ದು, 2000ದಿಂದಲೂ  ಜಯಲಲಿತಾ ಅವರ ಮಧುಮೇಹಕ್ಕೆ ಚಿಕಿತ್ಸೆ ನೀಡುತ್ತಿದ್ದರು. ಮಾರ್ಚ್ 2015ರಿಂದ ಅವರ ಆರೋಗ್ಯ ಕ್ಷೀಣಿಸತೊಡಗಿತ್ತು ಎಂದು ಅವರು ಹೇಳಿಕೆ ನೀಡಿದ್ದಾರೆ.
2014ರಲ್ಲಿ ಜಯಲಲಿತಾ ಬೆಂಗಳೂರಿನ ಜೈಲಿನಲ್ಲಿದ್ದಾಗಲೂ ಜಯಲಲಿತಾ ಅವರ ರಕ್ತ, ಮತ್ತು ಮಧುಮೇಹದ ಪ್ರಮಾಣ ಸರಿಯಾದ ಪ್ರಮಾಣದಲ್ಲಿತ್ತು ಎಂದು ಶಾಂತರಾಮ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com