- Tag results for tamilnadu
![]() | ತಮಿಳುನಾಡು: ಹಿಜಾಬ್ ತೆಗೆಯುವಂತೆ ಮಹಿಳೆಗೆ ಒತ್ತಾಯ, ಆರು ಮಂದಿ ಬಂಧನಈ ವಾರದ ಆರಂಭದಲ್ಲಿ ಐತಿಹಾಸಿಕ ವೆಲ್ಲೂರು ಕೋಟೆಗೆ ಭೇಟಿ ನೀಡುತ್ತಿದ್ದ ಮಹಿಳೆಯೊಬ್ಬಳ ಹಿಜಾಬ್ ತೆಗೆಯುವಂತೆ ಒತ್ತಾಯಿಸಿ ಅದನ್ನು ವಿಡಿಯೋ ಮಾಡಿದ ಆರು ಮಂದಿಯನ್ನು ತಮಿಳುನಾಡಿನ ವೆಲ್ಲೂರಿನಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಗುರುವಾರ ತಿಳಿಸಿದ್ದಾರೆ. |
![]() | ತಮಿಳುನಾಡು: ನರ್ಸಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ, ಚರ್ಚ್ ಪಾದ್ರಿ ಬಂಧನನರ್ಸಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಚರ್ಚ್ ಪಾದ್ರಿಯೊಬ್ಬರನ್ನು ಸೋಮವಾರ ಕನ್ಯಾಕುಮಾರಿಯಲ್ಲಿ ಬಂಧಿಸಲಾಗಿದೆ. ನರ್ಸಿಂಗ್ ವಿದ್ಯಾರ್ಥಿಯ ದೂರಿನ ಆಧಾರದ ಮೇಲೆ ಪಾದ್ರಿ ಬೆನೆಡಿಕ್ಟ್ ಆಂಟೊ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ ಆತ ಕಳೆದೆರಡು ದಿನಗಳಿಂದ ತಲೆಮರೆಸಿಕೊಂಡಿದ್ದ. |
![]() | ತಮಿಳುನಾಡು: ವಲಸಿಗರ ಮೇಲೆ ದಾಳಿ ಕುರಿತು ನಕಲಿ ವಿಡಿಯೋ ಶೇರ್ ಮಾಡುತ್ತಿದ್ದ ಬಿಹಾರ ವ್ಯಕ್ತಿಯ ಬಂಧನತಿರುಪ್ಪೂರ್ ಮತ್ತು ತಮಿಳುನಾಡಿನ ಇತರ ಭಾಗಗಳಲ್ಲಿ ಬಿಹಾರ ವಲಸೆ ಕಾರ್ಮಿಕರ ಮೇಲೆ ದಾಳಿಯ ನಕಲಿ ವಿಡಿಯೊಗಳನ್ನು ಶೇರ್ ಮಾಡುತ್ತಿದ್ದ ಬಿಹಾರ ಮೂಲದ ರೂಪೇಶ್ ಕುಮಾರ್ ಎಂಬಾತನನ್ನು ತಿರುಪ್ಪೂರ್ ಜಿಲ್ಲೆಯ ಸೈಬರ್ ಕ್ರೈಂ... |
![]() | ಕಾಂಚೀಪುರಂ: ತರಬೇತುದಾರನಿಂದ ಅತ್ಯಾಚಾರ ಯತ್ನ; ತಪ್ಪಿಸಿಕೊಳ್ಳಲು ಮಹಡಿಯಿಂದ ಜಿಗಿದ ಯುವ ಆಟಗಾರ್ತಿಅತ್ಯಾಚಾರಕ್ಕೆ ಯತ್ನಿಸಿದ ತರಬೇತುದಾರನಿಂದ ತಪ್ಪಿಸಿಕೊಳ್ಳಲು ಆಟಗಾರ್ತಿಯೊಬ್ಬರು ಮೊದಲ ಮಹಡಿಯಿಂದ ಜಿಗಿದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. |
![]() | 'ಮಹಿಳೆಯರಿಗೆ ಸುರಕ್ಷಿತವಲ್ಲ'; ಬಿಜೆಪಿಗೆ ಗುಡ್ ಬೈ ಹೇಳಿದ ನಟಿ ಗಾಯತ್ರಿ ರಘುರಾಮ್, ಅಣ್ಣಾಮಲೈ ವಿರುದ್ಧ ಕಿಡಿತಮಿಳುನಾಡು ಬಿಜೆಪಿ ನಾಯಕಿ ಗಾಯತ್ರಿ ರಘುರಾಮ್ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ತಮಿಳುನಾಡು ಬಿಜೆಪಿ ಘಟಕ ಮಹಿಳೆಯರಿಗೆ ಸುರಕ್ಷಿತವಲ್ಲ ಎಂದು ಬಿಜೆಪಿ ಅಧ್ಯಕ್ಷ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ವಿರುದ್ಧ ಕಿಡಿಕಾರಿದ್ದಾರೆ. |
![]() | ನೇಮಕಾತಿ 2022: ಅಂಚೆ ಇಲಾಖೆಯಲ್ಲಿ 7 ಹುದ್ದೆಗಳು ಖಾಲಿ, ಕೂಡಲೇ ಅರ್ಜಿ ಸಲ್ಲಿಸಿಭಾರತೀಯ ಅಂಚೆ ಇಲಾಖೆಯಲ್ಲಿ 7 ನುರಿತ ಕುಶಲಕರ್ಮಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಹಾಕಲು 8ನೇ ತರಗತಿ ಪಾಸಾಗಿದ್ರೆ ಸಾಕು. |
![]() | ಕಬ್ಬು ಕಟಾವಿಗೆ ಕರೆತರಲಾಗಿದ್ದ ತಮಿಳುನಾಡಿನ 10 ಕಾರ್ಮಿಕರನ್ನು ರಕ್ಷಿಸಿದ ಹಾಸನ ಪೊಲೀಸರುತಾಲ್ಲೂಕಿನ ಗನ್ನಿಕಾಡಾ ಗ್ರಾಮದ ಸಮೀಪ ಹುಲಿವಾಲಾ ಕೊಪ್ಪಾಲುನಲ್ಲಿ ತಮಿಳುನಾಡಿನ 10 ಕಾರ್ಮಿಕರನ್ನು ಹಾಸನ ಪೊಲೀಸರು ರಕ್ಷಿಸಿದ್ದಾರೆ. |
![]() | ಮಂಗಳೂರು ಆಟೋ ಸ್ಫೋಟ: ಸ್ಥಳೀಯ ಸಂಪರ್ಕದ ಸಾಧ್ಯತೆ, ತಮಿಳುನಾಡು, ಕೇರಳದಲ್ಲೂ ತನಿಖೆ!ಮಂಗಳೂರಿನಲ್ಲಿ ನವೆಂಬರ್ 19 ರಂದು ಸಂಭವಿಸಿದ ಸ್ಫೋಟದ ಹಿಂದಿನ ಪ್ರಮುಖ ಶಂಕಿತ ಜಾಗತಿಕ ಭಯೋತ್ಪಾದನಾ ಸಂಘಟನೆಯಿಂದ ಪ್ರೇರಿತನಾಗಿದ್ದು, ತನಿಖೆಯು ದಕ್ಷಿಣದ ಇನ್ನೂ ಎರಡು ರಾಜ್ಯಗಳಿಗೂ ವಿಸ್ತರಿಸುತ್ತಿದೆ. |
![]() | ಎಐಎಡಿಎಂಕೆ ನಾಯಕತ್ವ ವಿವಾದ: ಪಳನಿಸ್ವಾಮಿ ಪರ ಮದ್ರಾಸ್ ಹೈಕೋರ್ಟ್ ಆದೇಶ, 'ಸುಪ್ರೀಂ' ಕದ ತಟ್ಟಲು ಪನ್ನೀರ್ ಸೆಲ್ವಂ ಸಿದ್ಧತೆತಮಿಳುನಾಡು ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಎಐಎಡಿಎಂಕೆ ಪಕ್ಷದ ನಾಯಕತ್ವ ವಿವಾದಕ್ಕೆ ಮದ್ರಾಸ್ ಹೈ ಕೋರ್ಟ್ ತಾರ್ಕಿಕ ಅಂತ್ಯ ಹಾಡಿದ್ದು, ಈ ಹಿಂದೆ ಒ ಪನ್ನೀರ್ ಸೆಲ್ವಂ ಪರವಾಗಿ ನೀಡಿದ್ದ ಆದೇಶವನ್ನು ಕೋರ್ಟ್ ವಜಾ ಮಾಡಿದೆ. |
![]() | ವೈರಲ್: ಇದು ಮಾತ್ರೆಯಲ್ಲ, ಫಾರ್ಮಾಸಿಸ್ಟ್- ನರ್ಸ್ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ!ತಮಿಳುನಾಡಿನ ಫಾರ್ಮಾಸಿಸ್ಟ್- ನರ್ಸ್ ಜೋಡಿಯೊಂದು ಮಾತ್ರೆ ರ್ಯಾಪರ್ ಮಾದರಿಯಲ್ಲಿ ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಿದ್ದು, ವೆಡ್ಡಿಂಗ್ ಕಾರ್ಡ್ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. |
![]() | ಕೊಯಂಬತ್ತೂರು: ಗೋ ಫಸ್ಟ್ ತುರ್ತು ಭೂ ಸ್ಪರ್ಶ; ತಪ್ಪು ಅಲಾರ್ಮ್ ಎಂದ ವಿಮಾನ ನಿಲ್ದಾಣ ಅಧಿಕಾರಿಗಳುಬೆಂಗಳೂರಿನಿಂದ ಮಾಲ್ಡೀವ್ಸ್ ನ ಮಾಲೆಗೆ ತೆರಳುತ್ತಿದ್ದ 92 ಪ್ರಯಾಣಿಕರಿದ್ದ ಗೋ ಫಸ್ಟ್ ವಿಮಾನವೊಂದು ಕೊಯಮತ್ತೂರಿನಲ್ಲಿ ತುರ್ತು ಭೂಸ್ಪರ್ಶವಾಗಿದೆ. |
![]() | ಕಲ್ಲಕುರಿಚಿ ವಿದ್ಯಾರ್ಥಿನಿ ಸಾವು: 2 ಶಿಕ್ಷಕರ ಬಂಧನ, ತನಿಖೆ ಜವಾಬ್ದಾರಿ ಸಿಬಿಸಿಐಡಿಗೆ, ಮರಣೋತ್ತರ ಪರೀಕ್ಷೆಗೆ ಮದ್ರಾಸ್ ಹೈಕೋರ್ಟ್ ಆದೇಶ!ವಿದ್ಯಾರ್ಥಿನಿಯೊಬ್ಬಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಪೊಲೀಸರು ಮತ್ತಿಬ್ಬರು ಶಿಕ್ಷಕರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. |
![]() | ಎಐಎಡಿಎಂಕೆ ಬಿಕ್ಕಟ್ಟು: ಒ ಪನ್ನೀರ್ ಸೆಲ್ವಂ ಉಚ್ಛಾಟನೆಗೆ ಪಕ್ಷ ನಿರ್ಣಯ; ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಇ ಪಳನಿಸ್ವಾಮಿ ಆಯ್ಕೆ!ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಬಿಕ್ಕಟ್ಟು ಮುಂದುವರೆದಿದ್ದು, ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಆಯ್ಕೆಯಾಗಿದ್ದು, ಇದರ ಬೆನ್ನಲ್ಲೇ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಒ ಪನ್ನೀರ್ ಸೆಲ್ವಂರನ್ನು ಉಚ್ಛಾಟನೆ ಮಾಡಲು ಸರ್ವಾನುತದಿಂದ ನಿರ್ಣಯ ಕೈಗೊಳ್ಳಲಾಗಿದೆ. |
![]() | ದೇವಸ್ಥಾನದ ಪ್ರತಿಮೆಗಳ ನವೀಕರಣ ನೆಪದಲ್ಲಿ 40 ಲಕ್ಷ ರೂಪಾಯಿ ಸಂಗ್ರಹ: ಯೂಟ್ಯೂಬರ್ ಕಾರ್ತಿಕ್ ಗೋಪಿನಾಥ್ ಬಂಧನ!ದೇವಾಲಯದ ಪ್ರತಿಮೆಗಳ ನವೀಕರಣಕ್ಕಾಗಿ ಜನಸಮೂಹದಿಂದ ಕನಿಷ್ಠ 40 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದ ಆರೋಪದ ಮೇಲೆ ಯೂಟ್ಯೂಬರ್ ಎಸ್ ಕಾರ್ತಿಕ್ ಗೋಪಿನಾಥ್ ಎಂಬುವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. |
![]() | ರಾಮೇಶ್ವರಂ: ಗರ್ಭಿಣಿ ಮಹಿಳೆ, 7 ಮಕ್ಕಳು ಸೇರಿ 18 ಲಂಕಾ ತಮಿಳು ವಲಸಿಗರು ವಶಕ್ಕೆ!ಗರ್ಭಿಣಿ ಮಹಿಳೆ, 7 ಮಕ್ಕಳು ಸೇರಿ 18 ಶ್ರೀಲಂಕಾ ಮೂಲದ ತಮಿಳು ವಲಸಿಗರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. |