ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ಬೃಹತ್ ನಮಾಜ್, ಕುರಾನ್ ಪಠಣ: ಆರ್ ಎಸ್ ಎಸ್ ಆಯೋಜನೆ

ಅಯೋಧ್ಯೆ ಪಟ್ಟಣದ ಇತಿಹಾಸದಲ್ಲಿ ಮೊದಲ ಬಾರಿಗೆ ಸರಯೂ ನದಿ ದಂಡೆಯಲ್ಲಿ ಬೃಹತ್ ಸಾಮೂಹಿಕ ನಮಾಜ್ ಹಾಗು ಇಸ್ಲಾಂ ಪವಿತ್ರ ಗ್ರಂಥ ಕುರಾನ್ ಪಠಣ ಕಾರ್ಯಕ್ರಮ ನಡೆಯಲಿದೆ.
ಅಯೋಧ್ಯೆ ಇತಿಹಾಸದಲ್ಲೇ ಮೊದಲ ಬಾರಿಗೆ ಬೃಹತ್ ನಮಾಜ್, ಕುರಾನ್ ಪಠಣ
ಅಯೋಧ್ಯೆ ಇತಿಹಾಸದಲ್ಲೇ ಮೊದಲ ಬಾರಿಗೆ ಬೃಹತ್ ನಮಾಜ್, ಕುರಾನ್ ಪಠಣ
ನವದೆಹಲಿ: ಅಯೋಧ್ಯೆ  ಪಟ್ಟಣದ ಇತಿಹಾಸದಲ್ಲಿ ಮೊದಲ ಬಾರಿಗೆ ಸರಯೂ ನದಿ ದಂಡೆಯಲ್ಲಿ ಬೃಹತ್ ಸಾಮೂಹಿಕ ನಮಾಜ್ ಹಾಗು ಇಸ್ಲಾಂ ಪವಿತ್ರ  ಗ್ರಂಥ ಕುರಾನ್ ಪಠಣ ಕಾರ್ಯಕ್ರಮ ನಡೆಯಲಿದೆ.
ವಿಶೇಷವೆಂದರೆ ರಾಷ್ಟ್ರೀಯ ಸ್ವಯಂಸೇವಾ ಸಂಘ ಹಾಗೂ ಅದರ ಮುಸ್ಲಿಮ್ ವಿಭಾಗ - ರಾಷ್ಟ್ರೀಯ ಮುಸ್ಲಿಂ ಮಂಚ್ ಈ ಕಾರ್ಯಕ್ರಮ ಆಯೋಜನೆ ಮಾಡಲಿದೆ. ಈ ಬೃಹತ್ ಪ್ರಾರ್ಥನೆ, ಕುರಾನ್ ಪಠಣ ಕಾರ್ಯಕ್ರಮವು ಇದೇ ಜುಲೈ 12 ನಡೆಯಲಿದೆ.
 ಹಿಂದೂ ಭಕ್ತರ ಜೊತೆಗೆ ಸುಮಾರು 1,500 ಮುಸ್ಲಿಮ್ ಉಲೇಮಾಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಸೂಫಿ ಸಂತರ ಸಮಾಧಿಗಳಿಗೆ ಸಹ ಅವರು ತೆರಳಲಿದ್ದಾರೆ.
ಉಲೇಮಾಗಳು ಮೊದಲಿಗೆ ವಾಝು (ಶುದ್ಧೀಕರಣ) ನಡೆಸಿ ನಂತರ ನಮಾಜ್ ನೆರವೇರಿಸುವರು. ಬಳಿಕ ಪವಿತ್ರ ಕುರಾನ್ ನ ಶ್ಲೋಕಗಳನ್ನು 5 ಲಕ್ಷ ಬಾರಿ ಪಠಿಸಲಾಗುವುದು. ಸರಯೂ ನದಿ ದಂಡೆಯ  ರಾಮ್ ಕಿ ಪೈದಿ ಘಾಟ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮವು ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ಸಾರಲಿದೆ. ಹಾಗೆಯೇ ಆರ್ ಎಸ್ ಎಸ್ ತಾನು ಮುಸ್ಲಿಂ ವಿರೋಧಿ ಎನ್ನುವ ಹಣೆಪಟ್ಟಿಯಿಂದ ಹೊರಬರಲು ಸಹಕಾರಿಯಾಗಿದೆ ಎಂದು ಭಾವಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com