ಹೈದರಾಬಾದ್ ನಿಂದ ಧಾರ್ಮಿಕ ಗುರು ಸ್ವಾಮಿ ಪರಿಪೂರ್ಣಾನಂದ ಗಡಿಪಾರು

ಪ್ರಚೋದನಾತ್ಮಕ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಈಗ ಗೃಹ ಬಂಧನದಲ್ಲಿರುವ ಧಾರ್ಮಿಕ ಗುರು...
ಸ್ವಾಮಿ ಪರಿಪೂರ್ಣಾನಂದ ಹಾಗೂ ಬಿಜೆಪಿ ನಾಯಕರು
ಸ್ವಾಮಿ ಪರಿಪೂರ್ಣಾನಂದ ಹಾಗೂ ಬಿಜೆಪಿ ನಾಯಕರು
ಹೈದರಾಬಾದ್: ಪ್ರಚೋದನಾತ್ಮಕ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಈಗ ಗೃಹ ಬಂಧನದಲ್ಲಿರುವ ಧಾರ್ಮಿಕ ಗುರು ಸ್ವಾಮಿ ಪರಿಪೂರ್ಣಾನಂದ ಅವರನ್ನು ಆರು ತಿಂಗಳ ಕಾಲ ಹೈದರಾಬಾದ್ ನಿಂದ ಗಡಿಪಾರು ಮಾಡಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
'ಧರ್ಮಗೃಹ ಯಾತ್ರೆ'(ಪಾದಯಾತ್ರೆ) ನಡೆಸಲು ಮುಂದಾಗಿದ್ದ ಕಾಕಿನಾಡದ ಶ್ರೀ ಪೀಠಂ ಮುಖ್ಯಸ್ಥ ಸ್ವಾಮಿ ಪೂರ್ಣಾನಂದ ಅವರನ್ನು ತೆಲಂಗಾಣ ಸಮಾಜ ವಿರೋಧಿ ಮತ್ತು ಅಪಾಯಕಾರಿ ಚಟುವಟಿಕೆ ತಡೆ ಕಾಯ್ದೆ ಅಡಿ ಗಡಿಪಾರು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪರಿಪೂರ್ಣಾನಂದ ಅವರನ್ನು ಮುಂದಿನ ಆರು ತಿಂಗಳ ಕಾಲ ನಗರದಿಂದ ಗಡಿಪಾರು ಮಾಡಲಾಗಿದೆ ಎಂದು ಹೈದಬಾರಾದ್ ಪೊಲೀಸ್ ಆಯುಕ್ತೆ ಅಂಜನಿ ಕುಮಾರ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ದೇವತೆಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದನ್ನು ಖಂಡಿಸಿ ಪಾದಯಾತ್ರೆಗೆ ಮುಂದಾಗಿದ್ದ ಪರಿಪೂರ್ಣಾನಂದ ಅವರನ್ನು ಜುಲೈ 9ರಿಂದ ಗೃಹ ಬಂಧನದಲ್ಲಿರಿಸಲಾಗಿತ್ತು.
ಇತ್ತೀಚಿಗೆ ಶ್ರೀರಾಮ ವಂಚಕ ಎಂದಿದ್ದ ತೆಲುಗು ಚಿತ್ರ ವಿಮರ್ಶಕ ಕಾರ್ತಿ ಮಹೇಶ್‌ ಅವರನ್ನು ಬಂಧಿಸುವಂತೆ ಸ್ವಾಮಿ ಒತ್ತಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com