ಆಂಧ್ರಪ್ರದೇಶ :ಖಾಸಗಿ ಉಕ್ಕು ಸ್ಥಾವರದಲ್ಲಿ ವಿಷಯುಕ್ತ ಅನಿಲ ಸೋರಿಕೆ, ಆರು ಕಾರ್ಮಿಕರು ಸಾವು

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಡಿಪಾತ್ರಿ ಪಟ್ಟಣದಲ್ಲಿನ ಖಾಸಗಿ ಉಕ್ಕು ಸ್ಥಾವರದಲ್ಲಿನ ವಿಷಯುಕ್ತ ಅನಿಲ ಸೇವಿಸಿ ಆರು ಮಂದಿ ಕಾರ್ಮಿಕರು ಇಂದು ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ವಿಜಯವಾಡ : ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಡಿಪಾತ್ರಿ ಪಟ್ಟಣದಲ್ಲಿನ ಖಾಸಗಿ ಉಕ್ಕು ಸ್ಥಾವರದಲ್ಲಿನ ವಿಷಯುಕ್ತ  ಅನಿಲ ಸೇವಿಸಿ ಆರು  ಮಂದಿ ಕಾರ್ಮಿಕರು ಇಂದು ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದ್ದು. ಇನ್ನಿಬ್ಬರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ. ಸ್ಥಾವರದಲ್ಲಿ ವಿಷಯುಕ್ತ ಅನಿಲ ಸೋರಿಕೆಯಾದ್ದರಿಂದ ಸುಮಾರು 10 ಜನರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು .

 ಮಾರ್ಗಮಧ್ಯದಲ್ಲಿಯೇ ಇಬ್ಬರು ಮೃತಪಟ್ಟಿದ್ದರೆ,  ಚಿಕಿತ್ಸೆ ನೀಡುತ್ತಿರಬೇಕಾದ್ದರೆ ಇನ್ನಿತರ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಇತ್ತೀಚಿನ ಮಾಹಿತಿಯಿಂದ ತಿಳಿದುಬಂದಿದೆ.

ಈ ಮಧ್ಯೆ  ಮೃತರ ಸಂಬಂಧಿಕರು  ಘಟಕದೊಳಗೆ ನುಗ್ಗಲು ಪ್ರಯತ್ನಿಸಿದ್ದರಿಂದ  ಹೊರಗಡೆ ಕೆಲಕಾಲ ಪರಿಸ್ಥಿತಿ ಪ್ರಕ್ಷುಬ್ದಗೊಂಡಿತ್ತು. ಆದರೆ. ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.  ಅನಿಲ ಸೋರಿಕೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com