ಹಿಂದೂ ರಾಷ್ಟ್ರದ ಬಗ್ಗೆ ನಂಬಿಕೆ ಇಲ್ಲದಿದ್ದರೆ ಬಹಿರಂಗವಾಗಿ ಹೇಳಿ: ಬಿಜೆಪಿಗೆ ತರೂರ್

ತಮ್ಮ ಹಿಂದೂ ಪಾಕಿಸ್ತಾನ ಹೇಳಿಕೆಯನ್ನು ಸಮರ್ಥಿಸಿಕೊಂಡ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್....
ಶಶಿ ತರೂರ್
ಶಶಿ ತರೂರ್
ತಿರುವನಂತಪುರ: ತಮ್ಮ ಹಿಂದೂ ಪಾಕಿಸ್ತಾನ ಹೇಳಿಕೆಯನ್ನು ಸಮರ್ಥಿಸಿಕೊಂಡ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು, ಒಂದು ವೇಳೆ ಬಿಜೆಪಿಗೆ ಹಿಂದೂ ರಾಷ್ಟ್ರದ ಬಗ್ಗೆ ನಂಬಿಕೆ ಇಲ್ಲದಿದ್ದರೆ ಅದನ್ನು ಬಹಿರಂಗವಾಗಿ ಹೇಳಲಿ ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿಗೆ ಟೀಕೆಯ ಬಗ್ಗೆ ಪ್ರತಿಕ್ರಿಯಿಸಿದ ಶಶಿ ತರೂರ್ ಅವರು, ತಮ್ಮ ಹೇಳಿಕೆಯನ್ನು ವಿಲಕ್ಷಣವಾಗಿ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ತಮ್ಮ ತಾವು ಬಳಸಿದ ಪದವನ್ನು ಅರ್ಥೈಸಿಕೊಳ್ಳುವ ಬಗ್ಗೆ ಸಣ್ಣ ವಿವರಣೆಯನ್ನು ನೀಡಿದ್ದಾರೆ.
ನಾನು ಮುಂಚೆ ಹೇಳಿದ್ದು, ಈಗ ಹೇಳುತ್ತಿರುವುದು ಎರಡೂ ಒಂದೇ.... ಪಾಕಿಸ್ತಾವನ್ನು ಒಂದು ಪ್ರಭಾವಿ ಧರ್ಮದ ಆಧಾರದ ಮೇಲೆ ರಚಿಸಲಾಗಿದೆ. ಅಲ್ಲಿ ಅಲ್ಪ ಸಂಖ್ಯಾತರಿಗೆ ಯಾವುದೇ ಬೆಲೆ ಇಲ್ಲ ಮತ್ತು ಸಮಾನ ಹಕ್ಕನ್ನು ನಿರಾಕರಿಸಲಾಗಿದೆ ಎಂದರು.
'ಆ ದೇಶದ ಸಿದ್ಧಾಂತವನ್ನು ಭಾರತ ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಆದರೆ ಬಿಜೆಪಿ ಮತ್ತು ಆರ್ ಎಸ್ಎಸ್ ಸಿದ್ಧಾಂತ ಪಾಕಿಸ್ತಾನದ ಪ್ರತಿಬಿಂಬವಾಗಿದೆ. ಬಹು ಸಂಖ್ಯಾತರ ರಾಷ್ಟ್ರ ನಿರ್ಮಾಣ ಮಾಡುವ ಮೂಲಕ ಅಲ್ಪ ಸಂಖ್ಯಾತರನ್ನು ತುಳಿಯುವ ಉದ್ದೇಶ ಹೊಂದಿದೆ' ಎಂದು ಶಶಿ ತರೂರ್ ವಿವರಿಸಿದ್ದಾರೆ.
ಇಂದು ತಿರುವನಂತಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಶಿ ತರೂರ್‌ ಮುಂದಿನ ಲೋಕಸಭೆಯಲ್ಲಿ ಮತ್ತೆ ಬಿಜೆಪಿ ಗೆದ್ದರೆ ಭಾರತ 'ಹಿಂದೂ ಪಾಕಿಸ್ತಾನ'ವಾಗಲಿದೆ ಎಂದಿದ್ದರು. ಬಿಜೆಪಿ ಈಗಿನ ಸಂವಿಧಾನವನ್ನು ಹಾಳುಮಾಡಿ ಹೊಸ ಸಂವಿಧಾನ ಬರೆಯುತ್ತದೆ. ಅದರಲ್ಲಿ ಅಲ್ಪ ಸಂಖ್ಯಾತರಿಗೆ ಬೆಲೆ ಇರುವುದಿಲ್ಲ ಎಂದು ತರೂರ್‌ ಆರೋಪಿಸಿದ್ದರು. ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ ತರೂರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com