ಪುಣೆ: ಪ್ರಖ್ಯಾತ ಆಧ್ಯಾತ್ಮಿಕ ನಾಯಕ ದಾದಾ ಪಿ ವಾಸ್ವಾನಿ ನಿಧನರಾಗಿದ್ದಾರೆ..
99 ವರ್ಷದ ವಾಸ್ವಾನಿ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆ ನಗರದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ನಿನ್ನೆ ರಾತ್ರಿಯಷ್ಟೇ ಡಿಸ್ಟಾರ್ಜ್ ಮಾಡಲಾಗಿತ್ತು.
ಇಂದು ಬೆಳಗ್ಗೆ ಅವರು ತಮ್ಮ ಮಿಶನ್ ಕೇಂದ್ರದಲ್ಲಿ ನಿಧನ ಹೊಂದಿದರು. ಮುಂದಿನ ತಿಂಗಳ ಶತಾಯುಷಿ ಆಗಲಿದ್ದ ವಾಸ್ವಾನಿ ಅವರ 100ನೇ ಹುಟ್ಟು ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲು ಮಿಶನ್ ಉದ್ದೇಶಿಸಿತ್ತು.
ವಾಸ್ವಾನಿ ಅವರು ಹುಟ್ಟಿದ್ದು ಪಾಕಿಸ್ಥಾನದ ಹೈದರಾಬಾದ್ ನಗರದಲ್ಲಿ ಸಿಂಧಿ ಕುಟುಂಬದಲ್ಲಿ; 1918ರ ಆಗಸ್ಟ್ 2ರಂದು. ದಾದಾ ವಾಸ್ವಾನಿ ಎಂದೇ ಅವರು ಪ್ರಖ್ಯಾತರಾಗಿದ್ದರು. ಪುಣೆಯ ಸಾಧು ವಾಸ್ವಾನಿ ಮಿಷನ್ ಮುಖ್ಯಸ್ಥರಾಗಿದ್ದರು. ಈ ಮಿಷನ್ ಆಸ್ಪತ್ರೆ ಮತ್ತು ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ.