ಸುರಕ್ಷತಾ ಜಾಗೃತಿ: ಬಲವಂತವಾಗಿ ತಳ್ಳಿದಾಗ ಸಜ್ಜಕ್ಕೆ ತಲೆ ಬಡಿದು ವಿದ್ಯಾರ್ಥಿನಿ ಸಾವು, ವಿಡಿಯೋ!

ವಿಪತ್ತು ಸನ್ನದ್ಧತೆ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಆತಂಕದಲ್ಲಿದ್ದ ವಿದ್ಯಾರ್ಥಿಯೊಬ್ಬಳನ್ನು ಟ್ರೈನರ್ ಕಟ್ಟಡದ ಎರಡನೇ ಮಹಡಿಯಿಂದ ಬಲವಂತವಾಗಿ ತಳ್ಳಿದ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಯಮುತ್ತೂರು: ವಿಪತ್ತು ಸನ್ನದ್ಧತೆ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಆತಂಕದಲ್ಲಿದ್ದ ವಿದ್ಯಾರ್ಥಿಯೊಬ್ಬಳನ್ನು ಟ್ರೈನರ್ ಕಟ್ಟಡದ ಎರಡನೇ ಮಹಡಿಯಿಂದ ಬಲವಂತವಾಗಿ ತಳ್ಳಿದ ಪರಿಣಾಮ ಆಕೆಯ ತಲೆ ಮೊದಲ ಮಹಡಿಯ ಸಜ್ಜಗೆ ಬಡಿದು ದಾರುಣ ಸಾವನ್ನಪ್ಪಿರುವ ಘಟನೆ ಕೊಯಮುತ್ತೂರಿನಲ್ಲಿ ನಡೆದಿದೆ. 
ಕೊವಯ್ ಕಲೈಮಗಲ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿಪತ್ತು ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಜಾಗೃತಿ ಕ್ರಮಗಳ ಬಗ್ಗೆ ಡೆಮೋ ನೀಡಲಾಗುತ್ತಿತ್ತು. ಈ ವೇಳೆ ವಿದ್ಯಾರ್ಥಿನಿ ಹಾಗೂ ಟ್ರೈನರ್ ಎರಡನೇ ಮಹಡಿಯಲ್ಲಿ ನಿಂತಿದ್ದಾರೆ. ಸುರಕ್ಷತೆಗಾಗಿ ಒಂದು ಹಗ್ಗ ಕಟ್ಟಲಾಗಿತ್ತು. ಕೆಳಗಡೆ ಯುವಕರ ತಂಡ ನೆಟ್ ಅನ್ನು ಹಿಡಿದುಕೊಂಡಿದ್ದರು. ಇಷ್ಟೇಲ್ಲಾ ಸುರಕ್ಷತೆ ಕ್ರಮಗಳನ್ನು ತೆಗೆದುಕೊಂಡಿದ್ದರು ಸಹ ಆ ವಿದ್ಯಾರ್ಥಿನಿ ಸಾವನ್ನಪ್ಪಿರುವುದು ದುರಾದುಷ್ಟಕರ.
ಮೃತ ವಿದ್ಯಾರ್ಥಿನಿ ಲೋಕೇಶ್ವರಿ ಈ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಎರಡನೇ ಮಹಡಿಯಲ್ಲಿ ಕುಳಿತಿದ್ದ ಆಕೆ ಕೆಳಗೆ ಬೀಳಬೇಕು ಎನ್ನುವಾಗ ಕೊಂಚ ಆತಂಕದಲ್ಲಿದ್ದರು. ನಂತರ ಇನ್ನೇನು ಮುಂದಕ್ಕೆ ಹಾರಬೇಕು ಎನ್ನುವಷ್ಟರಲ್ಲಿ ಆಕೆಯ ಹಿಂದೆ ನಿಂತಿದ್ದ ಟ್ರೈನರ್ ಆಕೆಯನ್ನು ತಳ್ಳಿದ್ದಾನೆ. ಮೊದಲೇ ಆತಂಕದಲ್ಲಿದ್ದ ಆಕೆ ಮುಂದಕ್ಕೆ ಹಾರದ ಪರಿಣಾಮ ಆಕೆ ತಲೆ ಮೊದಲ ಮಹಡಿಯ ಸಜ್ಜಕ್ಕೆ ಬಡಿದು ಮೃತಪಟ್ಟಿದ್ದಾಳೆ. ಇದನ್ನು ವಿದ್ಯಾರ್ಥಿಯೊಬ್ಬ ವಿಡಿಯೋ ಮಾಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com