ಕಲ್ಲಿದ್ದಲು ಹಗರಣ: ನವೀನ್ ಜಿಂದಾಲ್ ವಿರುದ್ಧ ಹೆಚ್ಚುವರಿ ಆರೋಪ ದಾಖಲಿಸಲು ನ್ಯಾಯಾಲಯ ಆದೇಶ

ಜಾರ್ಖಂಡ್ ಕಲ್ಲಿದ್ದಲು ನಿಕ್ಷೇಪದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಮತ್ತು ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ವಿರುದ್ಧ .....
ನವೀನ್ ಜಿಂದಾಲ್
ನವೀನ್ ಜಿಂದಾಲ್
ನವದೆಹಲಿ: ಜಾರ್ಖಂಡ್ ಕಲ್ಲಿದ್ದಲು ನಿಕ್ಷೇಪದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಮತ್ತು ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ವಿರುದ್ಧ ಲಂಚ ನೀಡಿದ್ದಾರೆನ್ನುವ ಹೆಚ್ಚುವರಿ ಆರೋಪವನ್ನು  ದಾಖಲಿಸುವಂತೆ ವಿಶೇಷ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ/
ಆಗಸ್ಟ್ 6 ರಂದು ಆರೋಪಿಗಳ ವಿರುದ್ಧ ಔಪಚಾರಿಕ ಶಿಕ್ಷೆ ಪ್ರಕಟವಾಗಲಿದೆ ಎಂದು ವಿಶೇಷ ನ್ಯಾಯಾಲಯ ನ್ಯಾಯಾಧೀಶ ಭರತ್ ಪರಾಶರ್ ಹೇಳಿದ್ದಾರೆ.
ಲಂಚದ ಆರೋಪ ದಾಕಲಿಸಬೇಕೆಂದು ಹೇಳಿದ ಕೋರ್ಟ್ಲಂ ಚದ ಆರೋಪವು  ಸೆಕ್ಷನ್ 12 ರ ಅಡಿಯಲ್ಲಿ ಭ್ರಷ್ಟಾಚಾರ ವಿರೋಧಿ ಕಾಯ್ದೆ , 1988 ರ ಅಡಿಯಲ್ಲಿ ಅಪರಾಧವಾಗಿದ್ದು ಆರು ತಿಂಗಳುಗಳಿಂದ ಐದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಮುಂಬಯಿ ಎಸ್ಸಾರ್ ಪವರ್ ಲಿಮಿಟೆಡ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸುಶೀಲ್ ಮಾರೂ ಮತ್ತು ಜಿಂದಾಲ್ ಸ್ಟೀಲ್ ಮತ್ತು ಪವರ್ (ಜೆಎಸ್ಪಿಎಲ್) ಸಲಹೆಗಾರ ಆನಂದ್ ಗೋಯೆಲ್,  ನಿಹಾರ್ ಸ್ಟಾಕ್ ಲಿಮಿಟೆಡ್ ನಿರ್ದೇಶಕ ಬಿಎಸ್ಎನ್ ಸೂರ್ಯ ನಾರಾಯಣ್,ಅವರುಗಳ ವಿರುದ್ಧ ರತೀಯ ದಂಡ ಸಂಹಿತೆಯ 120 (ಬಿ) ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಯ ಹೂಡುವಂತೆ ಕೋರ್ಟ್ ತಿಳಿಸಿದೆ.
ಕಳೆದ ವರ್ಷ ಸೆಪ್ಟಂಬರ್ 4 ರಂದು ಮಧ್ಯಪ್ರದೇಶದ ಉರ್ತಾನ್ ನಾರ್ತ್ ಕಲ್ಲಿದ್ದಲು ಬ್ಲಾಕ್ ಗೆ ಸಂಬಂಧಿಸಿ ಅಕ್ರಮಗಳ ವಿರುದ್ಧ ಆರೋಪಿಗಳಾಗಿದ್ದ ಜಿಂದಾಲ್ ಹಾಗೂ ಇತರೆ ಮೂವರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದ್ದಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com