ಪ್ರಧಾನಿ ಮೋದಿ ಅವರನ್ನು ಪಾಕಿಸ್ತಾನದ ಜಿಯಾ ಉಲ್ ಹಕ್ ಗೆ ಹೋಲಿಕೆ ಮಾಡಿದ ದಿಗ್ವಿಜಯ್ ಸಿಂಗ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನದ ವಿವಾದಾತ್ಮಕ ನಾಯಕ ಜಿಯಾ ಉಲ್ ಹಕ್ ಅವರಿಗೆ ಹೋಲಿಸಿದ್ದಾರೆ....
ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್
ಮಧ್ಯಪ್ರದೇಶ: ಶಶಿ ತರೂರ್ ವಿವಾದಾತ್ಮಕ ಹೇಳಿಕೆಯ ನಂತರ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮತ್ತೊಂದು ಹೇಳಿಕೆ ನೀಡಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನದ ವಿವಾದಾತ್ಮಕ ನಾಯಕ ಜಿಯಾ ಉಲ್ ಹಕ್ ಅವರಿಗೆ ಹೋಲಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ದಿಗ್ವಿಜಯ್ ಸಿಂಗ್, ದೇಶದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ ಧಾರ್ಮಿಕ ಉಗ್ರಗಾಮಿತ್ವವನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ  ಧಾರ್ಮಿಕ ಉಗ್ರಗಾಮಿತ್ವ ಹರಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ, ಪ್ರಧಾನಿ ಮೋದಿ ಅವರ ಸರ್ಕಾರ ಪಾಕಿಸ್ತಾನ ಸರ್ವಾಧಿಕಾರಿ ಜಿಯಾ ಉಲ್ ಹಕ್ ಅವರಂತೆ ನಿರಂಕುಶತ್ವ ಮೆರೆಯುತ್ತಿದ್ದಾರೆ.
ಭಾರತ ಸರ್ಕಾರ ಧಾರ್ಮಿಕ ಉಗ್ರಗಾಮಿತ್ವವನ್ನು ದೇಶದಲ್ಲಿ ಪ್ರಚೋದಿಸುತ್ತಿದೆ, ಹಿಂದುತ್ವ ಎಂಬುದು ಇದೊಂದು ಅಪಾಯಕಾರಿ ಟ್ರೆಂಡ್ ಎಂದು ಸಿಂಗ್ ತಿಳಿಸಿದ್ದಾರೆ.
ಜಿಯಾ ಉಲ್ ಹಕ್  ಜಮಾತ್ ಇ ಇಸ್ಲಾ ನಂತರ ಸಂಘಟನೆಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಹಾಗೆಯೇ ಭಾರತದಲ್ಲಿ ತಾಲಿಬಾನ್ ನಂತಹ ಭಯೋತ್ಪಾದಕ ಚಟುವಟಿಕೆಗೆ ಮನ್ನಣೆ ನೀಡುತ್ತಿದೆ. ಪಾಕಿಸ್ತಾನದಲ್ಲಿ ಹೆಚ್ಚಿನ ಬಾಂಬ್ ಬ್ಲಾಸ್ಟ್ ಆಗುತ್ತದೆ. ಅಲ್ಲಿ ಮುಸ್ಲಿಂ ಸಾಯುತ್ತಿದ್ದಾರೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com