ಭಾರತಕ್ಕೆ ಭಾರೀ ಹಿನ್ನಡೆ: ಮೋಸ್ಟ್ ವಾಂಟೆಡ್ ಟೆರರಿಸ್ಟ್ ನನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದ ಯುಎಇ

ಬಿಜೆಪಿ ಮುಖಂಡ ಹರೇನ್ ಪಾಂಡ್ಯ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯನ್ನು ಯುನೈಟೆಡ್ ಎಮಿರೇಟ್ಸ್ ಅಧಿಕಾರಿಗಳು ಪಾಕಿಸ್ತಾನಕ್ಕೆ ಹಸ್ತಾಂತರಿಸಿದ್ದು ...
ಫಾರೂಕ್ ದೇವ್ಡೀವಾಲಾ
ಫಾರೂಕ್ ದೇವ್ಡೀವಾಲಾ
Updated on
ನವದೆಹಲಿ: ಬಿಜೆಪಿ ಮುಖಂಡ ಹರೇನ್ ಪಾಂಡ್ಯ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯನ್ನು ಯುನೈಟೆಡ್ ಎಮಿರೇಟ್ಸ್ ಅಧಿಕಾರಿಗಳು ಪಾಕಿಸ್ತಾನಕ್ಕೆ ಹಸ್ತಾಂತರಿಸಿದ್ದು ಭಾರತೀಯ ಏಜೆನ್ಸಿಗಳಿಗೆ ಭಾರೀ ಹಿನ್ನಡೆಯಾಗಿದೆ. 
ಮೋಸ್ಟ್ ವಾಂಟೆಟ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನ ಅಪ್ತನಾದ ಫಾರೂಕ್ ದೇವ್ಡಿವಾಲಾನನ್ನು ಇತ್ತೀಚೆಗೆ ದುಬೈ ನಲ್ಲಿ ಬಂಧಿಸಲಾಗಿತ್ತು,  ಜೊತೆಗೆ ಮುಂಬಯಿ ಮೂಲದ ಸ್ಯಾಮ್ ಎಂಬಾತನನ್ನು ವಶಕ್ಕೆ ತೆಗೆದು ಕೊಳ್ಳಲಾಗಿತ್ತು. ಆತನನ್ನು ಕೂಡ ಪಾಕಿಸ್ತಾನಕ್ಕೆ ವಶಕ್ಕೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಪಾರೂಕ್ ಡೇವ್ಡಿವಾಲಾ ಪಾಕಿಸ್ತಾನ ನಟೋರಿಯಸ್ ಸ್ಪೈ ಎಜೆನ್ಸಿ ಐಎಸ್ಐ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ಭಾರತೀಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ಯುಎಇಯಲ್ಲಿ ಆತ ಇರುವುದರ ಬಗ್ಗೆ ಪದೇ ಪದೇ ಮಾಹಿತಿ ನೀಡಲಾಗುತ್ತಿತ್ತು, ನಂತರ ನಡೆದ ನಾಟಕೀಯ ಬೆಳವಣಿಗೆಗಳಲ್ಲಿ ಡೇವ್ಡಿವಾಲಾ ಭಾರತೀಯನಲ್ಲ ಆತ, ಪಾಕಿಸ್ತಾನ ಪ್ರಜೆ ಎಂದು ಪಾಕಿಸ್ತಾನ ಘೋಷಿಸಿತು, ಇದರ ಆಧಾರದ ಮೇಲೆ ಯುಎಇ ಆತನನ್ನು ಪಾಕಿಸ್ತಾನಕ್ಕೆ ಹಸ್ತಾಂತರ ಮಾಡಿದೆ.
ಭಾರತದ ಮೇಲೆ ಹಿಡಿತ ಸಾಧಿಸಲು ಪಾಕಿಸ್ತಾನ ಐಎಸ್ಐ  ವಿಶೇಷ ದಳವೊಂದನ್ನು ಸ್ಥಾಪಿಸಿದೆ. ಆತ ಭಾರತಕ್ಕೆ ಬೇಕಾಗಿದ್ದ ಆರೋಪಿ ವಿದೇಶದಲ್ಲಿ ಆತನನ್ನು ಬಂಧಿಸಿ ಪಾಕಿಸ್ತಾನ ಮತ್ತೆ ಆತನನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
ಪಾಕಿಸ್ತಾನದ ಗೂಡಚಾರಿಕೆ ಸಂಸ್ಥೆ ಐಎಸ್ ಐ ದೇವಿಡ್ ವಾಲಾ ಭಾರತಕ್ಕೆ ಹಸ್ತಾಂತರವಾಗುವುದನ್ನು ತಪ್ಪಿಸಲು ಅಗತ್ಯವಾದ ದಾಖಲೆ ಸೃಷ್ಟಿಸಿ ತನ್ನ ವಶಕ್ಕೆ ತೆಗೆದುಕೊಂಡಿದೆ ಭಾರತೀಯ ಸಂಸ್ಥೆಗಳು ಆರೋಪಿಸಿವೆ,

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com