'ಮಲ್ಯ ಸ್ಮಾರ್ಟ್' ಎಂದಿದ್ದಕ್ಕೆ ಕ್ಷಮೆ ಕೇಳಿದ ಕೇಂದ್ರ ಸಚಿವ

ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಮಾಡಲಾಗದೇ ಸುಸ್ತಿದಾರರಾಗಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಸ್ಮಾರ್ಟ್ ಎಂದಿದ್ದ ಕೇಂದ್ರ ಸಚಿವ ಜುವಾಲ್ ಒರಾಮ್ ಕ್ಷಮೆ ಕೇಳಿದ್ದಾರೆ.
'ಮಲ್ಯ ಸ್ಮಾರ್ಟ್' ಎಂದಿದ್ದಕ್ಕೆ ಕ್ಷಮೆ ಕೇಳಿದ ಕೇಂದ್ರ ಸಚಿವ
'ಮಲ್ಯ ಸ್ಮಾರ್ಟ್' ಎಂದಿದ್ದಕ್ಕೆ ಕ್ಷಮೆ ಕೇಳಿದ ಕೇಂದ್ರ ಸಚಿವ
Updated on: 
ನವದೆಹಲಿ: ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಮಾಡಲಾಗದೇ ಸುಸ್ತಿದಾರರಾಗಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಸ್ಮಾರ್ಟ್ ಎಂದಿದ್ದ ಕೇಂದ್ರ ಸಚಿವ ಜುವಾಲ್ ಒರಾಮ್ ಕ್ಷಮೆ ಕೇಳಿದ್ದಾರೆ. 
2018ರ ರಾಷ್ಟ್ರೀಯ ಆದಿವಾಸಿ ಉದ್ಯಮಿಗಳ ಸಮ್ಮೇಳನದಲ್ಲಿ ಮಾತನಾಡುವ ವೇಳೆ ಜುವಾಲ್ ಒರಾಮ್, ಕೇವಲ ಕಷ್ಟಪಟ್ಟು ಕೆಲಸ ಮಾಡಿದ್ರೆ ಯಶಸ್ವಿಯಾಗಲ್ಲ. ಮಲ್ಯನ ರೀತಿ ಸ್ಮಾರ್ಟ್ ಆಗಿ ಎಂದು ಉದ್ಯಮಿಗಳಿಗೆ ಕಿವಿಮಾತು ಹೇಳಿದ್ದರು.
ವಿಜಯ್ ಮಲ್ಯನನ್ನು ನೀವೆಲ್ಲಾ ಟೀಕಿಸುತ್ತೀರಿ, ಆದರೆ ವಿಜಯ್ ಮಲ್ಯ ಸ್ಮಾರ್ಟ್, ಅವರು ಬುದ್ಧಿವಂತ ಜನರನ್ನು ನೌಕರರನ್ನಾಗಿ ನೇಮಿಸಿಕೊಂಡಿದ್ದರು, ಬ್ಯಾಂಕರ್ ಹಾಗೂ ರಾಜಕಾರಣಿಗಳು, ಸರ್ಕಾರದೊಂದಿಗೇ ಸ್ಮಾರ್ಟ್ ಆಗಿ ವ್ಯವಹರಿಸಿದರು ಎಂದು ಜುವಾಲ್ ಒರಾಮ್ ಹೇಳಿದ್ದಾರೆ. 
ಈ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ಒರಾಮ್, ನಾನು ಆಕಸ್ಮಿಕವಾಗಿ ವಿಜಯ್ ಮಲ್ಯ ಹೆಸರನ್ನು ಪ್ರಸ್ತಾಪಿಸಿದೆ, ಬೇರೆ ಯಾರ ಹೆಸರನ್ನಾದರೂ ಹೇಳಬೇಕಿತ್ತು, ಅವರ ಹೆಸರು ಉಲ್ಲೇಖಿಸಿ ತಪ್ಪು ಮಾಡಿದೆ ಎಂದು ಕ್ಷಮೆ ಕೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com