ಉತ್ತರ ಪ್ರದೇಶ : ಗೋ ಕಳ್ಳಸಾಗಣೆ ತಡೆಯುವಲ್ಲಿ ವಿಫಲ: ತನ್ನ ವಿರುದ್ಧವೇ ದೂರು ದಾಖಲಿಸಿದ್ದ ಪೊಲೀಸ್ !

ಗೋ ಕಳ್ಳಸಾಗಣೆ ತಡೆಯುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮೀರತ್ ಮುಖ್ಯ ಠಾಣಾಧಿಕಾರಿ ತನ್ನನ್ನೂ ಸೇರಿದಂತೆ ಇತರ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.
ಪೊಲೀಸ್ ಚಿತ್ರ
ಪೊಲೀಸ್ ಚಿತ್ರ
ಮೀರತ್: ಇದೊಂದು ರೀತಿಯ ವಿಚಿತ್ರಕಾರಿ ಘಟನೆ. ಗೋ ಕಳ್ಳಸಾಗಣೆ ತಡೆಯುವಲ್ಲಿ ವಿಫಲವಾದ  ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮೀರತ್ ಮುಖ್ಯ ಠಾಣಾಧಿಕಾರಿ ತನ್ನನ್ನೂ ಸೇರಿದಂತೆ  ಇತರ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.
ಕಾರಕೊಡಾ ಠಾಣೆಯ ಉಸ್ತುವಾರಿ ತೆಗೆದುಕೊಳ್ಳುವ ಮುನ್ನ  ದೋಷಪೂರಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರ ಕಾನೂನು  ರೂಪಿಸಿದ್ದಾಗಿ  ಸುದ್ದಿಸಂಸ್ಥೆಯೊಂದಕ್ಕೆ ಮುಖ್ಯ ಠಾಣಾಧಿಕಾರಿ ರಾಜೇಂದ್ರ ತ್ಯಾಗಿ ತಿಳಿಸಿದ್ದಾರೆ.
ಅಪರಾಧ ವಿರುದ್ಧ ಕ್ರಮ ತೆಗೆದುಕೊಳ್ಳದ ಅಧಿಕಾರಿಯನ್ನು ಜವಾಬ್ದಾರನ್ನಾಗಿಸುವ ನಿಟ್ಟಿನಲ್ಲಿ ತಾವೇ ಈ ಪರಿಕಲ್ಪನೆಯನ್ನು ರೂಪಿಸಿದ್ದೇನೆ. ಆದರೆ, ಗೋ ಕಳ್ಳಸಾಗಣೆ ತಡೆಯುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ತನ್ನ ವಿರುದ್ಧವೇ ದೂರು ದಾಖಲಿಸಿರುವುದಾಗಿ ಅವರು ಹೇಳಿದ್ದಾರೆ.
ಬೀಟ್ ಪೊಲೀಸ್ ವ್ಯಾಪ್ತಿಯಲ್ಲಿ ಒಂದು ವೇಳೆ ಯಾವುದೇ ಕಳ್ಳತನ ಅಥವಾ ಕೊಲೆ ನಡೆದ್ದರೆ ಆ ಕಾನ್ಸ್ ಟೇಬಲ್ ನನ್ನೆ ಜವಾಬ್ದಾರರನ್ನಾಗಿ ಮಾಡುವ ಉದ್ದೇಶದಿಂದ ಇಂತಹದೊಂದು ಕಾನೂನನ್ನೇ ತಾವೇ ಜಾರಿಗೆ ತರಲಾಗಿದ್ದು,ಎರಡಕ್ಕಿಂತ ಹೆಚ್ಚು ಬಾರಿ ನಿರ್ಲಕ್ಷ್ಯ ವಹಿಸಿದ್ದರೆ ಅಂತಹ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆದೇ ರೀತಿಯಲ್ಲಿ ಆರು ಪೊಲೀಸ್  ಕಾನ್ಸ್ ಟೇಬಲ್ ವಿರುದ್ಧ ದೂರು ದಾಖಲಿಸಿರುವುದಾಗಿ ಎಸ್ ಹೆಚ್ ಒ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com