ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಜಫರ್ಯಾಬ್ ಜಿಲಾನಿ
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಜಫರ್ಯಾಬ್ ಜಿಲಾನಿ

5 ಶರಿಯಾ ಕೋರ್ಟ್ ಸ್ಥಾಪನೆಗೆ ಎಐಎಂಪಿಎಲ್'ಬಿ ನಿರ್ಧಾರ

ದೇಶದಲ್ಲಿ 10 ಶರಿಯಾ ನ್ಯಾಯಾಲಯಗಳ ಸ್ಥಾಪನೆಗೆ ತಮ್ಮ ಮುಂದೆ ಪ್ರಸ್ತಾಪವಿದ್ದು, ಇದರಲ್ಲಿ 5 ನ್ಯಾಯಾಲಯಗಳ ಸ್ಥಾಪನೆಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಒಪ್ಪಿಗೆ ನೀಡಿದೆ ಎಂದು ಮಂಡಳಿ ಅಧ್ಯಕ್ಷ ಜಫರ್ಯಾಬ್...
ನವದೆಹಲಿ; ದೇಶದಲ್ಲಿ 10 ಶರಿಯಾ ನ್ಯಾಯಾಲಯಗಳ ಸ್ಥಾಪನೆಗೆ ತಮ್ಮ ಮುಂದೆ ಪ್ರಸ್ತಾಪವಿದ್ದು, ಇದರಲ್ಲಿ 5 ನ್ಯಾಯಾಲಯಗಳ ಸ್ಥಾಪನೆಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಒಪ್ಪಿಗೆ ನೀಡಿದೆ ಎಂದು ಮಂಡಳಿ ಅಧ್ಯಕ್ಷ ಜಫರ್ಯಾಬ್ ಜಿಲಾನಿ ಹೇಳಿದ್ದಾರೆ. 
ಸರ್ಕಾರಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಇಂತಹ ಜಾತಿ ನ್ಯಾಯಾಲಯ ಬೇಡ ಎಂಬ ವಿರೋಧದ ನಡುವೆಯೂ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ನಿರ್ಧಾರ ಕೈಗೊಂಡಿದೆ. 
ಸೋಮವಾರ ಉತ್ತರಪ್ರದೇಶದ ಕನೌಜ್ ನಲ್ಲಿ ಜುಲೈ.22 ರಂದು ಸೂರತ್ ನಲ್ಲಿ, ಸೆ.9ರಂದು ಮಹಾರಾಷ್ಟ್ರದ ಒಂದು ಸ್ಥಳದಲ್ಲಿ ಸ್ಥಾಪಿಸಲಾಗುತ್ತದೆ. ನ.20ರಂದು ಒಂದು ಹಾಗೂ 5ನೇ ನ್ಯಾಯಾಲಯವನ್ನು ಇದೇ ವರ್ಷ ಸ್ಥಾಪಿಸಲಾಗುತ್ತದೆ ಎಂದು ಜಿಲಾನಿ ತಿಳಿಸಿದ್ದಾರೆ. 
ಇನ್ನೂ 5 ನ್ಯಾಯಾಲಯಗಳ ಪ್ರಸ್ತಾಪ ಪರಿಶೀಲನೆಯಲ್ಲಿದ್ದು, ಶೀಘ್ರದಲ್ಲಿಯೇ ಈ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com