ಫ್ರಾನ್ಸ್ ಫೀಫಾ ವಿಶ್ವಕಪ್ ಗೆದ್ದಿದ್ದಕ್ಕೆ ಕಿರಣ್ ಬೇಡಿ ಪಾಂಡಿಚರಿ ಜನತೆಗೆ ಅಭಿನಂದನೆ ಸಲ್ಲಿಸಿದ್ದೇಕೆ ಗೊತ್ತಾ?
ದೇಶ
ಫ್ರಾನ್ಸ್ ಫೀಫಾ ವಿಶ್ವಕಪ್ ಗೆದ್ದಿದ್ದಕ್ಕೆ ಕಿರಣ್ ಬೇಡಿ ಪಾಂಡಿಚರಿ ಜನತೆಗೆ ಅಭಿನಂದನೆ ಸಲ್ಲಿಸಿದ್ದೇಕೆ ಗೊತ್ತಾ?
2018ರ ಫೀಫಾ ವಿಶ್ವಕಪ್ ಫೈನಲ್ಸ್ ನಲ್ಲಿ ಕ್ರೊವೇಷಿಯಾ ವಿರುದ್ಧ ಫ್ರಾನ್ಸ್ ಜಯ ಗಳಿಸಿದ್ದು, ಪುದುಚರಿ ರಾಜ್ಯಪಾಲೆ ಕಿರಣ್ ಬೇಡಿ ಪುದುಚೆರಿಯ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪಾಂಡಿಚರಿ: 2018ರ ಫೀಫಾ ವಿಶ್ವಕಪ್ ಫೈನಲ್ಸ್ ನಲ್ಲಿ ಕ್ರೊವೇಷಿಯಾ ವಿರುದ್ಧ ಫ್ರಾನ್ಸ್ ಜಯ ಗಳಿಸಿದ್ದು, ಪುದುಚರಿ ರಾಜ್ಯಪಾಲೆ ಕಿರಣ್ ಬೇಡಿ ಪುದುಚೆರಿಯ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸಾಮಾನ್ಯವಾಗಿ ತಮ್ಮ ಹೇಳಿಕೆ, ಸಾಮಾಜಿಕ ಜಾಲತಾಣದಲ್ಲಿನ ಬರಹದ ಮೂಲಕ ಸುದ್ದಿಯಾಗುವ ಕಿರಣ್ ಬೇಡಿ, ಈ ಬಾರಿ ಫೀಫಾ ವಿಶ್ವಕಪ್ ಗೆದ್ದ ತಂಡಕ್ಕೆ ಅಭಿನಂದನೆ ಸಲ್ಲಿಸುವ ವಿಷಯದಲ್ಲಿಯೂ ಕಿರನ್ ಬೇಡಿ ಸುದ್ದಿಗೆ ಗ್ರಾಸವಾಗಿದ್ದಾರೆ. ಫ್ರಾನ್ಸ್ ತಂಡ ಗೆಲ್ಲುತ್ತಿದ್ದಂತೆಯೇ, ಟ್ವೀಟ್ ಮಾಡಿದ ಕಿರಣ್ ಬೇಡಿ, ಈ ಹಿಂದೆ ಫ್ರೆಂಚ್ ಆಡಳಿತಕ್ಕೊಳಪಟ್ಟಿದ್ದ ಪುದುಚರಿಯ ಜನತೆ ಫೀಫಾ ವಿಶ್ವಕಪ್ ನ್ನು ಗೆದ್ದಿದ್ದೇವೆ, ಅಭಿನಂದನೆಗಳು ಸ್ನೇಹಿತರೇ ಎಂದು ಟ್ವೀಟ್ ಮಾಡಿದ್ದಾರೆ.
We the Puducherrians (erstwhile French Territory) won the World Cup.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ