ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ರೈತರ ಸಮಾವೇಶದಲ್ಲಿ ಮಾತನಾಡಿರುವ ಪ್ರಧಾನಿ ಮೋದಿಯವರು, ನನ್ನ ಸರ್ಕಾರ ನಿಮ್ಮ ಸರ್ಕಾರ. ನಮ್ಮ ಸರ್ಕಾರ ರೈತರ ಆದಾಯವನ್ನು ದುಪ್ಪಟ್ಟು ಮಾಡುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಶ್ಚಿಮ ಬಂಗಾಳದಲ್ಲಿಂದು 'ಮಾ ಮಾಟಿ ಮನುಷ್' ಮುಖವನ್ನು ಎಲ್ಲರೂ ನೋಡುತ್ತಿದ್ದಾರೆ. ಇಲ್ಲಿ ಸಿಂಡಿಕೇಟ ರಾಜಕೀಯ ನಡೆಯುತ್ತಿದ್ದು, ಪ್ರತಿಸ್ಪರ್ಧಿಗಳನ್ನು ಹತ್ಯೆ ಮಾಡುವ ಕೆಲಸವನ್ನು ಅದು ಮಾಡುತ್ತಿದೆ. ಈ ಸಿಂಡಿಕೇಟ್ ಅನುಮತಿಯಿಲ್ಲದೆಯೇ ಪಶ್ಚಿಮ ಬಂಗಾಳದಲ್ಲಿ ಏನನ್ನೂ ಮಾಡಲೂ ಸಾಧ್ಯವಿಲ್ಲ. ಪೂಜೆ ಮಾಡುವುದೂ ಕೂಡ ರಾಜ್ಯದಲ್ಲಿ ಕಷ್ಟಕರವಾಗಿ ಹೋಗಿದೆ ಎಂದು ಆಡಳಿತಾರೂಢ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.