ಈ ಹೇಳಿಕೆಗೆ ಕೆಲ ಪರ ಹಾಗೂ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾದ ಬಳಿಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಕಶ್ಯಪ್ ಅವರು, ಇದು ನನ್ನ ವೈಯಕ್ತಿಕ ಅಭಿಪ್ರಾಯ. ಮತಾಂತರಗೊಳ್ಳುವ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ನಿಷೇಧಿಸಬೇಕು. ಇದನ್ನು ಅನುಸರಿಸುವುದು ಉತ್ತಮವಾಗಿರುತ್ತದೆ. ಈ ರೀತಿಯ ನಿರ್ಧಾರದಿಂದ ಮತಾಂತರಗೊಳ್ಳುವ ಸಂಖ್ಯೆಗಳೂ ಕೂಡ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.