

ಮುಜಾಫರ್ ನಗರ: ಮಗಳ ಪ್ರೇಮ ವಿವಾಹಕ್ಕೆ ಸಂಬಂದಪಟ್ಟಂತೆ ಅಣ್ಣ -ತಮ್ಮಂದಿರ ನಡುವೆ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿದ್ದು, ಆಕ್ರೋಶಗೊಂಡ ತಮ್ಮಂದಿರು ಅಣ್ಣನನ್ನು ಗುಂಡಿಟ್ಟು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಸಲ್ಲಾ ಖೇಡಿ ಗ್ರಾಮದಲ್ಲಿ ನಡೆದಿದೆ.
ಮನೋಜ್ ಕುಮಾರ್ ( 55) ಮೃತಪಟ್ಟ ಹಿರಿಯಣ್ಣ. ತಮ್ಮಂದಿರರಾದ ಬಾಬ್ಲು ಕುಮಾರ್ ಮತ್ತು ಸುಭಾಷ್ ಎಂಬವರು ಕಳೆದ ರಾತ್ರಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ವೃತ್ತ ನಿರೀಕ್ಷಿಕ ಕಲು ಸಿಂಗ್ ಸುದ್ದಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಘಟನೆಯಲ್ಲಿ ಆರೋಪಿ ಬಾಬ್ಲು ಕುಮಾರ್ ಕೂಡಾ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇಬ್ಬರು ತಮ್ಮಂದಿರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಕೊನೆಯ ಮಗಳ ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದು ಬಾಬ್ಲು ಕುಮಾರ್ ಹಾಗೂ ಸುಭಾಷ್ , ತನ್ನ ಅಣ್ಣನ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿಲಾಗಿದೆ.
ಕುಟುಂಬದ ವಿರೋಧದ ನಡುವೆಯೂ ಮೃತನ ಕೊನೆಯ ಮಗಳು ಪ್ರೇಮ ವಿವಾಹವಾಗಿದ್ದಳು. ಈ ವಿಚಾರವೇ ಗಲಾಟೆಗೆ ಕಾರಣ ಎಂದು ತಿಳಿದುಬಂದಿದೆ.