ಬುಲೆಟ್ ರೈಲಿಗಾಗಿ ಕೋಟ್ಯಾಂತರ ರು. ವೆಚ್ಚ, ಆದ್ರೆ ರೈತರ ಹಾಲಿಗೆ ಏಕೆ ಹಣ ಇಲ್ಲ?: ಕೇಂದ್ರಕ್ಕೆ ಶಿವಸೇನೆ ಪ್ರಶ್ನೆ

ಹಾಲು ಖರೀದಿ ದರ ಏರಿಕೆಗೆ ಒತ್ತಾಯಿಸಿ ಮಹಾರಾಷ್ಟ್ರ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಬೆಂಬಲ...
ರೈತರ ಪ್ರತಿಭಟನೆ
ರೈತರ ಪ್ರತಿಭಟನೆ
ಮುಂಬೈ: ಹಾಲು ಖರೀದಿ ದರ ಏರಿಕೆಗೆ ಒತ್ತಾಯಿಸಿ ಮಹಾರಾಷ್ಟ್ರ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಬೆಂಬಲ ನೀಡಿದ್ದು, ಬುಲೆಟ್ ರೈಲು ಯೋಜನೆಗಾಗಿ ಸಾವಿರಾರು ಕೋಟಿ ರುಪಾಯಿ ವೆಚ್ಚ ಮಾಡುತ್ತಿರುವ ಕೇಂದ್ರ ಸರ್ಕಾರ, ರೈತರಿಂದ ಹಾಲು ಖರೀದಿ ದರ ಏಕೆ ಹೆಚ್ಚಳ ಮಾಡುತ್ತಿಲ್ಲ ಎಂದು ಪ್ರಶ್ನಿಸಿದೆ.
ಹಾಲು ಖರೀದಿ ದರ ಪ್ರತಿ ಲೀಟರ್ ಗೆ 5 ರುಪಾಯಿ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಮಹಾರಾಷ್ಟ್ರಾದ್ಯಂತ ರೈತರು, ಹಾಲನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆಯ ಅಂಗವಾಗಿ ರೈತರು ಮಾಹಾರಾಷ್ಟ್ರದ ಹಲವು ಭಾಗಗಳಲ್ಲಿ ಸೋಮವಾರ ಬೆಳಗ್ಗೆ ಹಾಲಿನ ಟ್ಯಾಂಕರ್ ಅನ್ನು ತಡೆದು, ಅದರಲ್ಲಿದ್ದ ಹಾಲನ್ನು ರಸ್ತೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರು ಯಾವುದೇ ಧರ್ಮ, ಜಾತಿ ಅಥವಾ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಕಳೆದ ನಾಲ್ಕು ವರ್ಷಗಳ ರಾಜ್ಯದಲ್ಲಿ ಸುಮಾರು ಮೂರು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಬಹುತೇಕರು ಪ್ರಧಾನಿ ಮೋದಿಗೆ ಮತ ಹಾಕಿದ್ದಾರೆ ಎಂದು ಶಿವಸೇನೆ ಹೇಳಿದೆ.
ಮೋದಿ ಸರ್ಕಾರ ಒಂದು ಕೈಯಿಂದ ರೈತರ ಪ್ರತಿಭಟನೆಯನ್ನು ಹತ್ತಿಕ್ಕಿಲು ಯತ್ನಿಸಿದರೆ, ಮತ್ತೊಂದು ಕಡೆ ಜೈ ಕಿಸಾನ್ ಎಂದು ಘೋಷಣೆ ಕೂಗುತ್ತಿರುವುದಾಗಿ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಆರೋಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com