ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ, ಪ್ರಚಾರ ಗಿಟ್ಟಿಸುವ ಹುನ್ನಾರ- ಬಿಜೆಪಿ ಮುಖಂಡ

ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ತನ್ನ ಮೇಲಿನ ಹಲ್ಲೆ ಪ್ರಕರಣವನ್ನು ಬೆಳಕಿಗೆ ತರುವ ಮೂಲಕ ಪ್ರಚಾರ ಗಿಟ್ಟಿಸುವ ಹುನ್ನಾರ ನಡೆಸುತ್ತಿದ್ದಾರೆ ಜಾರ್ಖಂಡ್ ನ ಬಿಜೆಪಿ ಮುಖಂಡ ಚಂದ್ರೇಶ್ವರ್ ಪ್ರಸಾದ್ ಸಿಂಗ್ ಆರೋಪಿಸಿದ್ದಾರೆ.
ಚಂದ್ರೇಶ್ವರ್ ಪ್ರಸಾದ್ ಸಿಂಗ್
ಚಂದ್ರೇಶ್ವರ್ ಪ್ರಸಾದ್ ಸಿಂಗ್

ರಾಂಚಿ : ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ತನ್ನ ಮೇಲಿನ ಹಲ್ಲೆ ಪ್ರಕರಣವನ್ನು ಬೆಳಕಿಗೆ ತರುವ ಮೂಲಕ ಪ್ರಚಾರ ಗಿಟ್ಟಿಸುವ  ಹುನ್ನಾರ ನಡೆಸುತ್ತಿದ್ದಾರೆ  ಜಾರ್ಖಂಡ್ ನ ಬಿಜೆಪಿ ಮುಖಂಡ ಚಂದ್ರೇಶ್ವರ್ ಪ್ರಸಾದ್ ಸಿಂಗ್ ಆರೋಪಿಸಿದ್ದಾರೆ.

ಸ್ವಾಮಿ ಅಗ್ನಿವೇಶ್ ಅವರಿಗೆ   ವೇದಿಕೆ ಮೇಲೆ  ಹಲ್ಲೆ ನಡೆಸುವ ವಿಚಾರ ಮೊದಲೇ ಅವರಿಗೆ ಗೊತಿತ್ತು.  ಪ್ರಚಾರಕ್ಕಾಗಿ ಈ ರೀತಿಯ ವ್ಯವಸ್ಥಿತ ಷಢ್ಯಂತ್ರ ನಡೆಸಲಾಗಿದೆ ಎಂದು ಅವರು ಟೀಕಿಸಿದ್ದಾರೆ.

ವಿದೇಶಿ ಹಣವನ್ನು ಸಂರಕ್ಷಿಸುತ್ತಿರುವ ಸ್ವಾಮಿ ಅಗ್ನಿವೇಶ್ ಭಾರತದ ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆದ್ದರೆ, ವೇದಿಕೆ ಮೇಲೆ ನಡೆದ ಹಲ್ಲೆಗಾಗಿ ಸ್ವಾಮಿ ಅಗ್ನಿವೇಶ್ ಹಾಗೂ ಅವರ ಕಡೆಯವರು ಎಷ್ಟು ಹಣ ಖರ್ಚು ಮಾಡಿದ್ದರು ಎಂಬುದು ಬಹಿರಂಗವಾಗಲಿದೆ ಎಂದು ಸಿಂಗ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಕೇಸರಿ ಬಟ್ಟೆ ತೊಟ್ಟಿರುವ ಸ್ವಾಮಿ ಅಗ್ನಿವೇಶ್  ವಂಚಕ , ಸ್ವಾಮಿ ಅಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾರ್ಖಂಡ್  ನ ಪಕೂರ್  ಜಿಲ್ಲೆಯಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿ ನಿರ್ಗಮಿಸುವಾಗ ಸ್ವಾಮಿ ಅಗ್ನಿವೇಶ್ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಆದರೆ, ಆ ಕಾರ್ಯಕರ್ತರು  ನಮ್ಮ ಪಕ್ಷದ ಕಾರ್ಯಕರ್ತರಲ್ಲ ಎಂದು ಬಿಜೆಪಿ ಹೇಳಿಕೆ ನೀಡಿದೆ.

 ಈ ಘಟನೆ ನಂತರ ಸ್ವಾಮಿ ಅಗ್ನಿವೇಶ್ ಅವರಿಗೆ ಜಾರ್ಖಂಡ್ ರಾಜ್ಯಸರ್ಕಾರದಿಂದ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ರಘುಬರ್ ದಾಸ್  ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com