ದೇಶದ್ರೋಹದ ಕಾನೂನಿನ ವ್ಯಾಪ್ತಿ, ಪರಿಧಿಯ ಬಗ್ಗೆ ಕಾನೂನಿ ಸಮಿತಿಯಿಂದ ಪರಿಶೀಲನೆ: ಕೇಂದ್ರ ಸರ್ಕಾರ

ದೇಶದ್ರೋಹದ ಕಾನೂನನ್ನು ಯಾವಾಗ ಪ್ರಯೋಗಿಸಬಹುದು, ಅದರ ವ್ಯಾಪ್ತಿ, ಪರಿಧಿಗಳೇನು ಎಂಬುದರ ಬಗ್ಗೆ ಕಾನೂನಿನ ಸಮಿತಿ ಪರಿಶೀಲನೆ ನಡೆಸುತ್ತಿದೆ ಎಂದು ಕೇಂದ್ರ ಸರ್ಕಾರ ಸಂಸತ್ ಗೆ ತಿಳಿಸಿದೆ.
ದೇಶದ್ರೋಹದ ಕಾನೂನಿನ ವ್ಯಾಪ್ತಿ, ಪರಿಧಿಯ ಬಗ್ಗೆ ಕಾನೂನಿ ಸಮಿತಿಯಿಂದ ಪರಿಶೀಲನೆ: ಕೇಂದ್ರ ಸರ್ಕಾರ
ದೇಶದ್ರೋಹದ ಕಾನೂನಿನ ವ್ಯಾಪ್ತಿ, ಪರಿಧಿಯ ಬಗ್ಗೆ ಕಾನೂನಿ ಸಮಿತಿಯಿಂದ ಪರಿಶೀಲನೆ: ಕೇಂದ್ರ ಸರ್ಕಾರ
ನವದೆಹಲಿ: ದೇಶದ್ರೋಹದ ಕಾನೂನನ್ನು ಯಾವಾಗ ಪ್ರಯೋಗಿಸಬಹುದು, ಅದರ ವ್ಯಾಪ್ತಿ, ಪರಿಧಿಗಳೇನು ಎಂಬುದರ ಬಗ್ಗೆ ಕಾನೂನಿನ ಸಮಿತಿ ಪರಿಶೀಲನೆ ನಡೆಸುತ್ತಿದೆ ಎಂದು ಕೇಂದ್ರ ಸರ್ಕಾರ ಸಂಸತ್ ಗೆ ತಿಳಿಸಿದೆ. 
ರಾಜ್ಯಸಭೆಯಲ್ಲಿ ಈ ಬಗ್ಗೆ ಲಿಖಿತ ಉತ್ತರ ನೀಡಿರುವ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್, ಸೆಕ್ಷನ್ 12ಎ ಅಡಿಯಲ್ಲಿ ಬರುವ ದೇಶ ದ್ರೋಹದ ಕಾನೂನನ್ನು ಬಳಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಬೇಕೆಂದು ಇಲಾಖೆ ಕಾನೂನು ಮತ್ತು ನ್ಯಾಯಾಂಗ ಇಲಾಖೆಗೆ ಮನವಿ ಮಾಡಿ ಅಗತ್ಯವಿದ್ದರೆ ತಿದ್ದುಪಡಿಗಳನ್ನು ಸಲಹೆ ನೀಡಿ ಎಂದು ಕೇಳಿದೆ ಎಂದು ಸಚಿವರು ಹೇಳಿದ್ದಾರೆ. 
ದೇಶದ್ರೋಹದ ಕಾನೂನನ್ನು ಯಾವಾಗ ಬಳಕೆ ಮಾಡಬಹುದು, ಅದರ ಪರಿಧಿ, ವ್ಯಾಪ್ತಿಗಳೇನು ಎಂಬುದನ್ನು ಕಾನೂನು ಸಮಿತಿಯಿ ಅಧ್ಯಯನ ನಡೆಸಿದ್ದು ಕರಡು ಸಿದ್ಧವಾಗಿದೆ. ಈ ಸಂಬಂಧ ಜೂ.26 ರಂದು ಸಭೆ ನಡೆಯಲಿದೆ ಎಂದು ಗೃಹ ಖಾತೆ ರಾಜ್ಯ ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com