ಶಬರಿಮಲೆ ದೇವಾಲಯ ವಿವಾದ : ಪುರುಷರಂತೆ ಮಹಿಳೆಯರಿಗೂ ಪೂಜೆಯ ಸಮಾನ ಅವಕಾಶ -ಸುಪ್ರೀಂಕೋರ್ಟ್

ಕೇರಳದ ಪ್ರಸಿದ್ಧ ದೇವಾಲಯ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಸುಪ್ರೀಂಕೋರ್ಟ್ ಬೆಂಬಲಿಸಿದೆ.ಪುರುಷರಂತೆ ಮಹಿಳೆರಿಗೂ ಸಮಾನವಾಗಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ತೀರ್ಪು ಪ್ರಕಟಿಸಿದೆ.
ಶಬರಿಮಲೆ ದೇವಾಲಯ
ಶಬರಿಮಲೆ ದೇವಾಲಯ

ನವದೆಹಲಿ: ಕೇರಳದ ಪ್ರಸಿದ್ಧ ದೇವಾಲಯ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಸುಪ್ರೀಂಕೋರ್ಟ್ ಬೆಂಬಲಿಸಿದೆ.

10 ರಿಂದ  50 ವರ್ಷದೊಳಗಿನ ಮಹಿಳೆಯರ ಶಬರಿಮಲೆ ಪ್ರವೇಶವನ್ನು ನಿಷೇಧ ಕುರಿತ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್  , ಪುರುಷರಂತೆ ಮಹಿಳೆರಿಗೂ ಸಮಾನವಾಗಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ತೀರ್ಪು ಪ್ರಕಟಿಸಿದೆ.

ದೇವಾಲಯಕ್ಕೆ ಹಲವು ವರ್ಷಗಳಿಂದ  ಮಹಿಳೆಯರ ಪ್ರವೇಶ ನಿರ್ಬಂಧ ಪ್ರಶ್ನಿಸಿ ಭಾರತೀಯ  ಯುವ ವಕೀಲರ ಅಸೋಸಿಯೇಷನ್ ಮತ್ತಿತರರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಮತ್ತು ನ್ಯಾಯಾಧೀಶರಾದ ಆರ್. ನಾರಿಮನ್ ,ಎ.ಎಂ. ಖನ್ವೀಲ್ ಕರ್ , ಡಿ. ವೈ. ಚಂದ್ರಚೂಡ್ , ಮತ್ತು ಇಂದು ಮಲ್ಹೋತ್ರಾ ಅವರಿದ್ದ  ನ್ಯಾಯಪೀಠ,  ಇದು ಸಂವಿಧಾನಕ್ಕೆ ವಿರೋಧವಾಗಿದೆ. ಒಂದು ಬಾರಿ ದೇವಾಲಯದ ಬಾಗಿಲು ತೆರೆದರೆ ಯಾರೂ ಬೇಕಾದರೂ ದೇವಾಲಯ ಪ್ರವೇಶಿಸಬಹುದು ಎಂದು ಹೇಳಿಕೆ ನೀಡಿದೆ.

ಖಾಸಗಿ ದೇವಾಲಯ ಎಂಬ ಕಲ್ಪನೆಯೇ ಇಲ್ಲ. ಪುರುಷರಂತೆ ಮಹಿಳೆಯರೂ ಸಮಾನವಾಗಿ ಪೂಜೆ ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.

 ದೇವಾಲಯದಲ್ಲಿ ಮಹಿಳೆಯರ ಪ್ರವೇಶ ನಿರ್ಬಂಧಿಸುವ ಮೂಲಕ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂಬ ಅರ್ಜಿ ವಿಚಾರಣೆಯನ್ನು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ  ಸುಪ್ರೀಂಕೋರ್ಟ್ ಮಹತ್ವದ ಐದು ಪ್ರಶ್ನೆಗಳನ್ನು  ರಚಿಸಿ ಸಂವಿಧಾನ ಪೀಠಕ್ಕೆ ವರ್ಗಾಯಿಸಿತ್ತು.

ಈ ಸಂಬಂಧದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮಹಿಳೆಯರಿಗೆ ದೇವಾಲಯ ಪ್ರವೇಶ ಅವಕಾಶ ಕಲ್ಪಿಸಿ ತೀರ್ಪು ನೀಡಿದೆ.

ಸುಪ್ರೀಂಕೋರ್ಟ್ ತೀರ್ಪಿನ ನಂತರ ಕೇರಳ ಸರ್ಕಾರ ಕೂಡಾ ತನ್ನ ನಿಲುವನ್ನು ಬದಲಾಯಿಸಿದೆ.  ರಾಜ್ಯ  ಹಿರಿಯ ವಕೀಲ ಜೆ. ಡಿ. ಗುಪ್ತಾ ಅವರ ಮೂಲಕ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದೆ.
ಸುಪ್ರೀಂಕೋರ್ಟ್ ತೀರ್ಪನ್ನು  ಗೌರವಿಸುವುದಾಗಿ ಕೇರಳದ ಸಚಿವ ಕೆ, ಸುರೇಂದ್ರನ್  ತಿಳಿಸಿದ್ದಾರೆ. ಸರ್ಕಾರದ ನಿಲುವು ದೇವಾಲಯದ ಆಡಳಿತ ಮಂಡಳಿಯ ನಿಲುವು ಕೂಡಾ ಆಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com