ಗುವಾಹಟಿ: ನೌಕರಿಗಾಗಿ ಹಣ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಹಿಳೆಯರು ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಿದ್ದಾರೆ.
ತೇಜ್ ಪುರ ಸಂಸದ ಆರ್ ಪಿ ಶರ್ಮಾ ಪುತ್ರಿ ಪಲ್ಲವಿ ಶರ್ಮ ಸೇರಿದಂತೆ ಸರ್ಕಾರಿ ಅಧಿಕಾರಿಗಳನ್ನು ಬಂಧಿಸಲಾಗಿದೆ.
ಉತ್ತರ ಪತ್ರಿಕೆಯಲ್ಲಿದ್ದ ಕೈ ಬರಹದ ಜೊತೆ ಈ ಅದಿಕಾರಿಗಳ ಬರವಣಿಗೆ ಮ್ಯಾಚ್ ಆಗದ ಆಕಾರಣ ಇವರನ್ನೆಲ್ಲಾ ಬಂಧಿಸಲಾಗಿದೆ,
ಈ ಮೊದಲು ಪೊಲೀಸರು ಅಸ್ಸಾಂ ಲೋಕಸೇವಾ ಆಯೋಗದ ಅಧ್ಯಕ್ಷ ರಾಕೇಶ್ ಕುಮಾರ್ ಪೌಲ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು. ನೌಕರಿಗಾಗಿ ಪ್ರತಿಯೊಬ್ಬ ಅಭ್ಯರ್ಥಿ ರಾಕೇಶ್ ಪೌಲ್ ಗೆ ಸುಮಾರು 15 ರಿಂದ 30 ಲಕ್ಷದವರೆಗೂ ಹಣ ನೀಡಿದ್ದರು. ಪ್ರಕರಣ ಸಂಬಂಧ ಇದುವರೆಗೂ ಒಟ್ಟು 63 ಮಂದಿಯನ್ನು ಬಂಧಿಸಲಾಗಿದೆ.